ಶಿರಸಿ: ಅಯೋಧ್ಯೆಯಲ್ಲಿ ಶ್ರೀಬಾಲರಾಮ ಮೂರ್ತಿಯ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲೆಡೆ ವಿವಿಧ ಧಾರ್ಮಿಕ , ಹವನ, ಹೋಮ, ಜಪತಪ, ಭಜನೆ ಮುಂತಾದವುಗಳು ನಡೆಯುತ್ತವೆ. ಅದರಂತೆ ಇಲ್ಲಿಯ ಅಂಬಾಗಿರಿಯ ಕಾಳಿಕಾಭವಾನಿ ದೇವಳದಲ್ಲಿ ಭವತಾರಣಿ ಭಜನಾ ಮಂಡಳಿಯ ಮಾತೆಯರು ಪ್ರತಿನಿತ್ಯ ಭಜನೆಯನ್ನು ನಡೆಸುವುದರ ಮೂಲಕ ಸೇವೆ ಮಾಡುತ್ತಿದ್ದಾರೆ.
ಜ.20ರಂದು ಬೆಳಿಗ್ಗೆ 10 ಗಂಟೆಗೆ ಶ್ರಮದಾನ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಜ.22ರಂದು ಬೆಳಿಗ್ಗೆ 10 ಗಂಟೆಗೆ ಭಜನೆ, ಕುಂಕುಮಾರ್ಚನೆ, ನಂತರ ದೇವಿಗೆ ಮಹಾಪೂಜೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅಂದು ಅಯೋಧ್ಯೆಯ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಿಸಲು ಕೂಡ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.