ಸಿದ್ದಾಪುರ: ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ(ಡೇ- ನಲ್ಮ) ಸ್ವ- ನಿಧಿ ಸೇ ಸಮೃದ್ಧಿ ಉತ್ಸವ ಪಟ್ಟಣ ಪಂಚಾಯಿತಿನಲ್ಲಿ ಗುರುವಾರ ನಡೆಯಿತು. ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಜಗದೀಶ್ ಆರ್ ನಾಯ್ಕ್ ಮಾತನಾಡಿ ನೀವು ಸ್ವಚ್ಛವಾಗಿದ್ದರೆ ನಗರ ಸ್ವಚ್ಛವಾಗಿರುತ್ತದೆ. ಉದ್ಯೋಗ ಮಾಡುವುದರ ಜೊತೆಗೆ ಸ್ವಚ್ಛತೆಗೂ ಹೆಚ್ಚಿನ ಗಮನ ನೀಡಬೇಕು. ಆ ಮೂಲಕ ದೇಶದ ಸ್ವಚ್ಛತೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯತ್ ಸದಸ್ಯ ರವಿಕುಮಾರ್ ನಾಯ್ಕ್ ಮಾತನಾಡಿ ಸರ್ಕಾರದಿಂದ ಸಿಗುವ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಂಡು ಸಿದ್ದಾಪುರದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಸದಸ್ಯ ನಂದನ್ ಬೋಧಕರ್ ಮಾತನಾಡಿ ವ್ಯಾಪಾರಸ್ಥರು ಹಂತ ಹಂತವಾಗಿ ಬೆಳವಣಿಗೆ ಹೊಂದಬೇಕು. ಆ ಮೂಲಕ ದೊಡ್ಡದಾದ ಉದ್ಯಮಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಮಿಥುನ್ ನಾಯ್ಕ ಪ್ಠಧಾನ ಮಂತ್ರಿ ಸೋನಿಧಿ ಯೋಜನೆ ಹಾಗೂ ಮುದ್ರಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಶಿವಶಂಕರ್ ಎನ್ ಕೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಿಡಿಪಿಓ ಮೇಲ್ವಿಚಾರಕಿ ಸುಜಾತ ಶಿಶು ಅಭಿವೃದ್ಧಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ, ಆರೋಗ್ಯ ಇಲಾಖೆ ಸೌಲಭ್ಯಗಳ ಬಗ್ಗೆ ಆನಂದ್ ಬಿಪಿ, ಎಸ್ ಬಿಐ ಬ್ಯಾಂಕ್ ನ ಯೋಗಿತಾ ಮರುಪಾವತಿ ಬಗ್ಗೆ ಪಟ್ಟಣ ಪಂಚಾಯಿತಿ ಸೌಲಭ್ಯಗಳ ಬಗ್ಗೆ ರಮೇಶ್ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ರೋಹಿತ್ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ 175ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಕಾರ್ಯಕಾರದ ಪ್ರಯೋಜನ ಪಡೆದುಕೊಂಡರು.