Slide
Slide
Slide
previous arrow
next arrow

ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ

300x250 AD

ದಾಂಡೇಲಿ: ಸ್ಥಗಿತಗೊಂಡಿರುವ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆಆಗ್ರಹಿಸಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯು ಶುಕ್ರವಾರ ನಗರದ ಹಸನ್ಮಾಳದಲ್ಲಿರುವ ರೈಲ್ವೆ ಹಳಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಫೈರೋಜ್ ಫಿರ್ಜಾದೆ, ಸಂಘಟನೆಯ ಪದಾಧಿಕಾರಿಗಳಾದ ರವಿ ಸುತಾರ್ ಮಾತನಾಡಿ ಬ್ರಿಟಿಷರ ಕಾಲದಿಂದಲೇ ಇದ್ದಂತಹ ರೈಲು ಸಂಚಾರ ಆನಂತರ ಸ್ಥಗಿತಗೊಂಡು ಸಾಕಷ್ಟು ವರ್ಷಗಳ ನಿರಂತರ ಹೋರಾಟದ ಫಲವಾಗಿ ಮತ್ತೆ ಪುನರಾರಂಭವಾಯಿತು. ಆದರೆ ಸಂದರ್ಭದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಹೀಗೆ ಸ್ಥಗಿತಗೊಳಿಸಲಾದ ರೈಲು ಸಂಚಾರವನ್ನು ಮತ್ತೆ ಪುನರಾರಂಭಿಸಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿಯನ್ನು ಮಾಡಿದ್ದರು ಒಂದೊಂದೇ ಕಾರಣಗಳನ್ನು ಹೇಳಿರುವುದು ಬಿಟ್ಟರೆ ಸಂಚಾರವನ್ನು ಪುನರಾರಂಭಿಸುವ ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿದೆ. 15 ದಿನದೊಳಗಡೆ ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ಕಾರ್ಯಾಲಯದ ಮುಂಭಾಗದಲ್ಲಿ ಮತ್ತು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ರೈಲ್ವೆ ಸಚಿವರಿಗೆ ಬರೆದ ಮನವಿಯನ್ನು ಹುಬ್ಬಳ್ಳಿ ರೈಲ್ವೆ ಇಲಾಖೆಯ ಅಧಿಕಾರಿಗಳ ಮೂಲಕ ನೀಡಲಾಯಿತು.

300x250 AD

ಈ ಸಂದರ್ಭದಲ್ಲಿ ಪ್ರಮುಖರುಗಳಾದ ಬಲವಂತ ಬೊಮ್ಮನಳ್ಳಿ, ದಿವಾಕರ ನಾಯ್ಕ, ಸತೀಶ ನಾಯ್ಕ, ಅವಿನಾಶ್ ಘೋಡ್ಕೆ, ಗೌರೀಶ್ ಬಾಬ್ರೇಕರ, ಶ್ಯಾಮು ಬೆಂಗಳೂರು, ಶ್ರೀಕಾಂತ್ ಅಸೋದೆ, ರಾಮಲಿಂಗ ಜಾಧವ್, ಸಲೀಂ‌ ಕಾಕರ್, ರಾಜಶೇಖರ ನಿಂಬಾಳ್ಕರ್, ಸಾಧಿಕ್ ಮುಲ್ಲಾ, ದಾದಾಪೀರ್, ಕರ್ಣಮ್ಮ ತೋಡಟ್ಟಿ, ಮುಜೀಬಾ ಛಬ್ಬಿ, ನೀಲಾ‌ ಮಾದರ, ಸವಿತಾ ದಂಡಗಿ, ಸಮೀರ್ ಅಂಕೋಲೆಕರ, ಮಂಜುಳಾ , ಬೇಬಿ, ಸಂಗೀತಾ ಅಮ್ರೆ, ಮೇರಿ, ದಿಲ್ಶಾದ್, ಭಾರ್ಗವಿ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾಂಡೇಲಿಯ ಪೊಲೀಸರು ಮತ್ತು ಹುಬ್ಬಳ್ಳಿಯ ರೈಲ್ವೆ ಪೊಲೀಸರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top