ಹಳಿಯಾಳ : ರಾಮಮಂದಿರದ ಉದ್ಘಾಟನೆಯ ನಿಮಿತ್ತ ದೇಶದಾದ್ಯಂತ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ಕರೆಯ ಮೇರೆಗೆ ಬಿಜೆಪಿ ಘಟಕದ ವತಿಯಿಂದ ಪಟ್ಟಣದ ಯಲ್ಲಾಪುರ ನಾಕಾ ಬಳಿ ಇರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಹಾಗೂ ಪಕ್ಕದ ಲಕ್ಷ್ಮೀ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು
ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನದ ಸಂಚಾಲಕರಾದ ಸಂತೋಷ ಘಟಕಾಂಬಳೆ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಪ್ರಮುಖರಾದ ಮಂಜುನಾಥ ಪಂಡಿತ, ವಿಲಾಸ ಯಡವಿ, ಉಲ್ಲಾಸ ಬೀಡಿಕರ, ಪ್ರದೀಪ ಹಿರೆೇಕರ, ಯಲ್ಲಪ್ಪ ಹೊನ್ನೋಜಿ, ಹನುಮಂತ ಚಲವಾದಿ, ಶಿವಾನಂದ ಶೆಟ್ಟರ, ಆಕಾಶ ಉಪ್ಪಿನ, ಸುನೀಲ್ ಬಾಗಳೆ, ಕುಮಾರ ಕಲಭಾವಿ, ಮುತ್ತು ಚಲವಾದಿ, ರಘುನಾಥ ಮಾದರ, ಮಾಲಾ ಹುಂಡೇಕರ, ಸ್ಥಳೀಯರು ಮೊದಲಾದವರು ಉಪಸ್ಥಿತರಿದ್ದರು.