Slide
Slide
Slide
previous arrow
next arrow

ಆಲೀವ್ ರಿಡ್ಲೆ ಜಾತಿ ಕಡಲಾಮೆ ಮೊಟ್ಟೆ ಪತ್ತೆ

300x250 AD

ಶಿರಸಿ: ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗಾಗಿ ಕಾಸರಕೋಡ ಟೊಂಕದ ಕಡಲತೀರದಲ್ಲಿ ಹೈದರಾಬಾದ್ ಮೂಲದ hppl ಕಂಪನಿಗೆ ಹಸ್ತಾಂತರಿಸಿದ ಪ್ರದೇಶದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಆಲೀವ್ ರಿಡ್ಲೆ ಜಾತಿಯ ಕಡಲಾಮೆಯೊಂದು ನೂರಾರು ಸಂಖ್ಯೆಯ ಮೊಟ್ಟೆಗಳನ್ನು ಇಟ್ಟಿರುವದು ಪತ್ತೆಯಾಗಿದೆ.ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಲಯ ಅರಣ್ಯಾಧಿಕಾರಿ ವಿಕ್ರಂ ಸಿಂಗ್ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಮೊಟ್ಟೆಗಳಿಗೆ ಗೂಡನ್ನು ನಿರ್ಮಿಸಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಕರ್ನಾಟಕ ಕಡಲಾಮೆ ಸಂಶೋಧನಾ ವಿಭಾಗದ ಜಾಹ್ನವಿ ಇನ್ನು ಮುಂತಾದ ತಜ್ಞರು,ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಊರಿನ ವಿವಿಧ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಪ್ರತಿ ವರ್ಷವೂ ಜನವರಿಯಿಂದ ಎಪ್ರಿಲ್ ತಿಂಗಳ ಅವಧಿಯಲ್ಲಿ ಮೊಟ್ಟೆಇಡುವ ವಾಡಿಕೆ ಇದ್ದು, ಈ ಅವಧಿಯಲ್ಲಿ ಸ್ಥಳೀಯ ಮೀನುಗಾರರು ಕಡಲತೀರದಲ್ಲಿ ಆಮೆಗಳು ಮೊಟ್ಟೆಇಡುವದನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಾರೆ.ಅರಣ್ಯ ಇಲಾಖೆಯವರ ಉಸ್ತುವಾರಿಯಲ್ಲಿ ಸ್ಥಳೀಯ ಜೈನಜಟಗೇಶ್ವರ ಯುವಕ ಸಮಿತಿಯವರು ಮತ್ತು ಮೀನುಗಾರರು ಕಡಲಾಮೆಗಳ ಮೊಟ್ಟೆಗಳನ್ನು ಅವು ಮರಿಗಳಾಗುವವರೆಗೆ ಅಂದರೆ ಸುಮಾರು 48ದಿವಸಗಳ ವರೆಗೆ ಜತನದಿಂದ ಸಂರಕ್ಷಣೆ ಮಾಡುತ್ತಾರೆ.ನಂತರದಲ್ಲಿ ಮರಿಗಳನ್ನು ಪೂಜಿಸಿ ಸಮುದ್ರಕ್ಕೆ ಬಿಟ್ಟು ಸಂಭ್ರಮಿಸುವದು ಇಲ್ಲಿನ ವಿಶೇಷತೆಯಾಗಿದೆ. ಕಡಲಾಮೆಗಳು ಕೂರ್ಮಾವತಾರದ ಮಹಾವಿಷ್ಣುವಿನ ಅಪರಾವತಾರ ಎನ್ನುವದು ಇಲ್ಲಿನ ಮೀನುಗಾರರ ನಂಬಿಕೆಯಾಗಿದೆ. ಇಲ್ಲಿನ ಕಡಲಾಮೆಗಳ ವಿಚಾರವು ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನದ ವಿರುದ್ಧ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿ ಪ್ರಮುಖವಾಗಿ ಉಲ್ಲೇಖಿಸಲ್ಪಿಟ್ಟಿದ್ದುದನ್ನು ಇಲ್ಲಿ ಸ್ಮರಿಸಬಹುದು.

300x250 AD
Share This
300x250 AD
300x250 AD
300x250 AD
Back to top