Slide
Slide
Slide
previous arrow
next arrow

ಶ್ರೀಕುಮಾರ ಸಂಸ್ಥೆಯಿಂದ ರಾಮಭಜನೆ, ಪ್ರಸಾದಭೋಜನ: ವೆಂಕ್ರಟಮಣ ಹೆಗಡೆ ಕವಲಕ್ಕಿ

300x250 AD

ಹೊನ್ನಾವರ: ಜ.೨೨ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಶ್ರೀಕುಮಾರ ಸಂಸ್ಥೆಯ ವತಿಯಿಂದ ರಾಮಭಜನೆ, ಮಹಾಪೂಜೆ ಹಾಗೂ ಪ್ರಸಾದಭೋಜನ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಕವಲಕ್ಕಿ ಹೇಳಿದರು‌.

ಪಟ್ಟಣದಲ್ಲಿ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ಕರ್ಕಿ ಕೋಣಕಾರ ಕಛೇರಿಯಲ್ಲಿ 3ಡಿ ಮಾದರಿಯಲ್ಲಿ 5.5 ಅಡಿ ಎತ್ತರದ ಪ್ರಭು ಶ್ರೀ ರಾಮನ ಪೋಟೋ ಅಳವಡಿಸಲಾಗುವುದು. ಮುಂಜಾನೆ 10;30ಕ್ಕೆ ಕೊನಳ್ಳಿಯ ಮಾರುತಿ ನಾಯ್ಕ ಇವರ ಮಹಾಸತಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ 12;30ಕ್ಕೆ ಮಹಾಪೂಜೆ ನಂತರ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಂಸದರಾದ ಅನಂತಕುಮಾರ ಹೆಗಡೆ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತೆ ಮನವಿ ಮಾಡಿದರು. ಪತ್ರಿಕಾಗೊಷ್ಟಿಯಲ್ಲಿ ಸೂರ್ಯನಾರಾಯಣ ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿ, ನಾಗರಾಜ ಯಾಜಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top