ಸಿದ್ದಾಪುರ: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಚುಕ್ಕಿ ಜಿಂಕೆಯೊಂದು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಪಟ್ಟಣದ ಚಂದ್ರಗುತ್ತಿ ರಸ್ತೆಯ ಜೀವನಧಾರ ಹತ್ತಿರ ಘಟನೆ ನಡೆದಿದ್ದು ಅಂದಾಜು ಐದು ವರ್ಷದ ಗಂಡು ಜಿಂಕೆ ಇದಾಗಿದೆ. ಸ್ಥಳಕ್ಕೆ ಎಸಿಎಫ್ ಪ್ರವೀಣ ಬಸ್ರೂರು, ಆರ್‌ಎಫ್‌ಒ ಬಸವರಾಜ್ ಬೋಚಳ್ಳಿ ಭೇಟಿನೀಡಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ-1972ರಡಿಯಲ್ಲಿ ಬುಧವಾರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಮರಣೋತ್ತರ ಪರೀಕ್ಷೆ ನಡೆಸಿದರು.