ದಾಂಡೇಲಿ: ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಅಪಘಾತದ ವೇಳೆಯ ಹಿಟ್ & ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕವನ್ನು ವಿರೋಧಿಸಿ ರಾಷ್ಟ್ರದಾದ್ಯಂತ ನಡೆಯುತ್ತಿರುವ ಮುಷ್ಕರವನ್ನು ಬೆಂಬಲಿಸಿ ಬುಧವಾರ ದಾಂಡೇಲಿಯಲ್ಲಿಯೂ ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ಸೇವೆ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಆಟೋಟ್ಯಾಕ್ಸಿ ಹಾಗೂ ಖಾಸಗಿ ಪ್ರಯಾಣಿಕ ವಾಹನಗಳ ಚಾಲಕರು ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಖಾಸಗಿ ಪ್ರಯಾಣಿಕ ಹಾಗೂ ಖಾಸಗಿ ವಾಣಿಜ್ಯ ವಾಹನಗಳ ಚಾಲಕರು ನಗರದ ಬಸ್ ನಿಲ್ದಾಣದಿಂದ ಕೆ.ಸಿ.ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಆನಂತರ ಕೆ.ಸಿ ವೃತ್ತದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಈ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾದ ರಾಜೇಸಾಬ್ ಕೇಸನೂರು, ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಚಾಲಕರ ಸಂಘಟನೆಗಳ ಪ್ರಮುಖರುಗಳಾದ ಬಾಬಾಸಾಬ ಜಮಾದಾರ, ಅರುಣ್ ಕುಮಾರ್, ಮುಸ್ತಾಫ ಹಕೀಂ, ನಾಗೇಶ ವಾಲೀಕರ , ಆನಂದ ಕುಮಾರ, ಇಲಿಯಾಸ್ , ರಮೇಶ ಭಂಡಾರಿ, ಬಾಬಾ ಅಕ್ಬರ್ ಮನಿಯಾರ, ಗೌಸ್ ಕಿತ್ತೂರ, ಅಶೋಕ ನಾಯ್ಕ, ಬಸವರಾಜ ಪಾಟೀಲ್, ಮಕ್ತುಂ ಕಿತ್ತೂರ, ಮೆಹಬೂಬ ಹಾಗೂ ಸಂಘಟನೆಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.