Slide
Slide
Slide
previous arrow
next arrow

ಸಂಸದರ ಮಾತಿನಿಂದ ಜಿಲ್ಲೆಯ ಜನ ತಲೆತಗ್ಗಿಸುವಂತಾಗಿದೆ: ದೀಪಕ್ ದೊಡ್ಡೂರು

300x250 AD

ಶಿರಸಿ: ರಾಜಕೀಯ ವ್ಯವಸ್ಥೆಯಲ್ಲಿ ಟೀಕೆ ಸರ್ವೇ ಸಾಮಾನ್ಯ. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅವರು ತೀರಾ ಕಳಹಂತದ ಟೀಕೆ ಖಂಡನೀಯ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಮಾಧ್ಯಮ ವಕ್ತಾರ ದೀಪಕ ದೊಡ್ಡೂರು ಹೇಳಿದರು.

ಅವರು ನಗರದ ಸುಪ್ರಿಯಾ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ, ಸಂಸ್ಕೃತಿ ಬಗ್ಗೆ ಉಪದೇಶ ಮಾಡುವವರ ಸಂಸ್ಕೃತಿ ಇಷ್ಟು ಕೆಳಮಟ್ಟ ತಲುಪಬಾರದು. ಸಜ್ಜನ ಹಿಂದು ನೀಡುವ ಹೇಳಿಕೆ ಇದಲ್ಲ. ಜಿಲ್ಲೆಯ ಜನರು ಇದರಿಂದ ತಲೆ ತಗ್ಗಿಸುವಂತಾಗಿದೆ ಎಂದರು.

ನಕಾರಾತ್ಮಕ ಧೋರಣೆಯಿಂದ ಜನರನ್ನು ಸೆಳೆಯುವ ಪ್ರಯತ್ನವನ್ನು ಸಂಸದ ಅನಂತಕುಮಾರ ಹೆಗಡೆ ಕೈಬಿಡಬೇಕು. ಪ್ರಧಾನಿ ಮೋದಿ ಜಿಲ್ಲೆಗೆ ಆಗಮಿಸಿದಾಗ ಮನೆಯಿಂದ ಹೊರಬರದ ಸಂಸದರು ಚುನಾವಣೆ ಹೊಸ್ತಿಲಿನಲ್ಲಿ ಜಿಲ್ಲೆಯ ಜನರಲ್ಲಿ ಕೋಮು ಭಾವನೆ ಬಿತ್ತಿ, ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ಕೋಮು ಸೌಹಾರ್ದತೆ ಕದಡುವ ಪ್ರಯತ್ನ ನಿರಂತರವಾಗಿ ತೊಡಗಿದ್ದಾರೆ. ಅವರು ರಾಜಕಾರಣಿ ಆಗುವ ಬದಲು ಇತಿಹಾಸ, ಸಾಹಿತ್ಯದ ಬಗ್ಗೆ ಬರೆಯುವವರಾದರೆ ಇನ್ನಷ್ಟು ಹೆಸರು ಮಾಡಬಹುದು ಎಂದ ಅವರು, ಸನಾತನ ಧರ್ಮ ಬೆಳೆಯುವಲ್ಲಿ ಕಾಂಗ್ರೆಸ್ ಕೂಡ ಜತೆಗಿದೆ. ಆದರೆ ಅದನ್ನು ಬಿಜೆಪಿಯವರು ತಮ್ಮ ಗುತ್ತಿಗೆ ಎಂಬಂತೆ ವರ್ತಿಸುತ್ತಿದ್ದಾರೆ. ಇದರ ಅವಶ್ಯಕತೆ ರಾಜ್ಯ ಹಾಗೂ ಜಿಲ್ಲೆಗೆ ಇಲ್ಲ. ಜಿಲ್ಲೆಯ ಜನ ಸಂಸದರಿಗೆ ಹುಲಿ ಪಟ್ಟ ನೀಡಿದ್ದಾರೆ. ಹಾಗಾಗಿ ಅವರು ನರಿ ಬುದ್ದಿ ತೋರಬಾರದು ಎಂದು ಹೇಳಿದರು.

300x250 AD

ಈ ವೇಳೆ ಪಕ್ಷದ ಪದಾಧಿಕಾರಿಗಳಾದ ಜಗದೀಶ ಗೌಡ, ಗಣೇಶ ದಾವಣಗೆರೆ, ಬಸವರಾಜ ದೊಡ್ಮನಿ, ದುಶ್ಯಂತರಾಜ ಕೊಲ್ಲೂರಿ ಇದ್ದರು.

Share This
300x250 AD
300x250 AD
300x250 AD
Back to top