Slide
Slide
Slide
previous arrow
next arrow

ವಜ್ರಳ್ಳಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ದೆಹಲಿಗೆ

300x250 AD

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ದೆಹಲಿಯಲ್ಲಿ ಜನವರಿ 18 ರಂದು ನಡೆಯಲಿರುವ ‘ಮಾದರಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಮಾವೇಶಕ್ಕೆ’ ಆಯ್ಕೆಯಾಗಿದ್ದಾರೆ. ಒಕ್ಕೂಟದ ಅಧ್ಯಕ್ಷರಾದ ಬೀಗಾರಿನ ಶ್ರೀಮತಿ ಗಾಯತ್ರಿ ಶಿವರಾಮ ಗಾಂವ್ಕರ್, ಉಪಾಧ್ಯಕ್ಷರಾದ ತೆಲಂಗಾರಿನ ಶ್ರೀಮತಿ ಅನ್ನಪೂರ್ಣ ರಾಮಚಂದ್ರ ಭಟ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಷರೀಫಾ ಮಹಮದ್ ಹುಸೇನ್ ಮುಲ್ಲಾ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟವು ರಾಜ್ಯದಲ್ಲೇ ಮಾದರಿ ಒಕ್ಕೂಟವಾಗಿದ್ದು ಈ ಹಿಂದೆಯೂ ಕೂಡ ಎರಡು ಭಾರಿ ಮುಖ್ಯಮಂತ್ರಿಗಳ ಪುರಸ್ಕಾರಕ್ಕೆ ಭಾಜನವಾಗಿತ್ತು ಎಂಬುದು ಗಮನಾರ್ಹ. ಈ ಬಾರಿ ದೆಹಲಿ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಒಕ್ಕೂಟ ಮಾಡುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕುಟುಂಬ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top