Slide
Slide
Slide
previous arrow
next arrow

ಹಳಿಯಾಳದಲ್ಲಿ ದೇಗುಲ ಸ್ವಚ್ಚತಾ ಅಭಿಯಾನ

300x250 AD

ಹಳಿಯಾಳ : ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ನರೇಂದ್ರ ಮೋದಿಜಿ ಕರೆ ನೀಡಿ ಹಿನ್ನಲೆಯಲ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆ ರಸ್ತೆಯ ಬಾಮಣಿಕೊಪ್ಪ ಮಾರ್ಗದಲ್ಲಿರುವ ಪುರಾತನ ಶ್ರೀಮಾರುತಿ ದೇವಸ್ಥಾನ ಹಾಗೂ ಆವರಣದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಸುನೀಲ ಹೆಗಡೆ, ಅಯೋಧ್ಯೆಯ ಶ್ರೀರಾಮ ಮಂದಿರ ಭಾರತೀಯರ ಹೆಮ್ಮೆಯ ಪ್ರತೀಕ. 500 ವರ್ಷಗಳಿಂದ ಕೋಟ್ಯಾಂತರ ಹಿಂದೂಗಳ ತ್ಯಾಗ ಬಲಿದಾನದೊಂದಿಗೆ ಕಾತುರದಿಂದ ಕಾಯುತ್ತಿದ್ದ ಪ್ರಭು ರಾಮನ ಮಂದಿರ ಜ.22 ರಂದು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ. ಇಂತಹ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವ ನಾವೇ ಧನ್ಯರು ಎಂದು ಹೇಳಿ ಇಂದಿನಿಂದ ಜ.21 ರವರೆಗೆ ಎಲ್ಲೆಡೆ ದೇವಾಲಯಗಳನ್ನು ಸ್ವಚ್ಛಗೊಳಿಸಿ 22 ರಂದು ಪ್ರತಿ ಮನೆಗಳಲ್ಲಿ ರಾಮಜ್ಯೋತಿ ಬೆಳಗುವ ಮೂಲಕ ಶ್ರೀರಾಮನನ್ನು ಸ್ವಾಗತಿಸುವಂತೆ ಕರೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಸ್ವಚ್ಛತಾ ಅಭಿಯಾನದ ಸಂಚಾಲಕರಾದ ಸಂತೋಷ ಘಟಕಾಂಬಳೆ, ಸಹ ಸಂಚಾಲಕರಾದ ಯಲ್ಲಪ್ಪ ಹೆಳವರ, ಜಿಲ್ಲಾ ಓಬಿಸಿ ಮೋರ್ಚಾ ಪ್ರ.ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಶಾಂತಾ ಹಿರೇಕರ, ಪ್ರಮುಖರಾದ ಮಂಜುನಾಥ ಪಂಡಿತ, ವಾಸುದೇವ ಪೂಜಾರಿ, ಆನಂದ ಕಂಚನಾಳಕರ, ಡೋಂಗ್ರು ಕೆಸರೇಕರ, ಉಲ್ಲಾಸ ಬೀಡಿಕರ, ಪ್ರದೀಪ ಹಿರೇಕರ, ಮೋಹನ ಮೌಳಂಗಿ, ಈಶ್ವರ ಉಪ್ಪಿನ, ನಾರಾಯಣ ಅಂತ್ರೋಳಕರ, ಆಕಾಶ ಉಪ್ಪಿನ, ಸುನೀಲ್ ‌ಬಾಗಳೆ, ರಘುನಾಥ ಮಾದರ, ರತ್ನಮಾಲಾ ಮೂಳೆ, ಜಯಲಕ್ಷ್ಮೀ ಚವ್ಹಾಣ, ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top