ಕಾರವಾರ: ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದ ಅಜ್ವಿ ಓಶನ್ ರಂಗ ಮಂದಿರದಲ್ಲಿ ನಗರದ ರಾಘವೇಂದ್ರ ಮಠದ ಅಂಗ ಸಂಸ್ಥೆಯಾದ ರಾಘವೇಂದ್ರ ಬೃಂದಾವನ ಸಮಿತಿ ವತಿಯಿಂದ ಭಜನ ಸಂಧ್ಯಾ ಸಂಗೀತ ಕಾರ್ಯಕ್ರಮ ಜರುಗಿತು.
ಪುಣೆಯ ಪ್ರಸಿದ್ಧ ಹಿಂದುಸ್ಥಾನಿ ಗಾಯಕ ಆನಂದ ಗಂಧರ್ವ ಬಿರುದಾಂಕಿತ ಪಂ. ಆನಂದ ಭಾಟೆ ಎರಡುವರೆ ತಾಸು ಮರಾಠಿ ನಾಟ್ಯ ಸಂಗೀತ, ಅಭಂಗ, ಕನ್ನಡ ಮತ್ತು ಮರಾಠಿಗಳಲ್ಲಿ ಭಕ್ತಿ ಗೀತೆಗಳನ್ನು ಹಾಡಿ ನೆರೆದ ಜನರನ್ನು ರಂಜಿಸಿದರು. ಅವರಿಗೆ ದತ್ತರಾಜ ಸುರ್ಲಾಕರ ಹಾರ್ಮೋನಿಯಮ್, ಮಯಾಂಕ ಬೇಡೆಕರ ತಬಲಾ, ಕಿಶೋರ ತೇಲಿ ಪಕ್ವಾಜ್ ಮತ್ತು ರಾಹುಲ್ ತಾಳ ಸಾತ್ ನೀಡಿದರು.
ಇದೇ ಸಂದರ್ಭದಲ್ಲಿ ದೇಶದ ವಿವಿಧೆಡೆ 500 ಹೆಚ್ಚು ಸಂಗೀತ ಕಚೇರಿಗಳನ್ನು ಸಂಘಟಿಸಿದ ಸಪ್ತಕ ಸಂಸ್ಥೆಯ ಮುಖ್ಯಸ್ಥ ಜಿ.ಎಸ್.ಹೆಗಡೆ, ಪಂ. ಆನಂದ ಭಾಟೆ ಮತ್ತು ಇತರ ಕಲಾವಿದರನ್ನು ಸನ್ಮಾನಿಸಲಾಯಿತು. ಹಿರಿಯ ನ್ಯಾಯವಾದಿ ಎಸ್. ಪಿ.ಕಾಮತ, ಸಮಿತಿಯ ಕಾರ್ಯದರ್ಶಿ ಆರ್. ಎಸ್. ಹಬ್ಬು ಸ್ವಾಗತಿಸಿ, ವಂದನಾರ್ಪಣೆ ಮಾಡಿದರು. ಸಮಿತಿಯ ಅಧ್ಯಕ್ಷ, ಕೆ. ಪ್ರಕಾಶ ರಾವ್, ಉಪಾಧ್ಯಕ್ಷ ಜಗನ್ನಾಥ ಜೋಶಿ ಉಪಸ್ಥಿತರಿದ್ದರು.