Slide
Slide
Slide
previous arrow
next arrow

ಬಿಜೆಪಿ ಘಟಕದಿಂದ ಭುವನೇಶ್ವರಿ ದೇವಾಲಯದ ಸ್ವಚ್ಛತಾ ಕಾರ್ಯ: ಕಾಗೇರಿ ಭಾಗಿ

300x250 AD

ಸಿದ್ದಾಪುರ:  ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ದೇಶದಾದ್ಯಂತ ಎಲ್ಲ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸಿದ್ದಾಪುರ ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು  ಭಾನುವಾರ ನಡೆಸಿದರು.

ಸ್ವಚ್ಛಾತಾ ಕಾರ್ಯಕ್ರಮದ ಪೂರ್ವದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 108ಬಾರಿ ರಾಮನಾಮ ಜಪಿಸಲಾಯಿತು. ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಾರುತಿ ನಾಯ್ಕ, ಪದಾಧಿಕಾರಿಗಳಾದ ಗುರುರಾಜ್ ಶಾನಭಾಗ, ಆದರ್ಶ ಪೈ ಬಿಳಗಿ, ಸುರೇಶ ನಾಯ್ಕ, ತೋಟಪ್ಪ ನಾಯ್ಕ, ಶಾಂತಕುಮಾರ ಭಟ್ಟ, ಗಿರೀಶ ಶೇಟ್, ಕೃಷ್ಣಮೂರ್ತಿ ನಾಯ್ಕ, ಮಹೇಶ ನಾಯ್ಕ, ಅಣ್ಣಪ್ಪ ನಾಯ್ಕ, ಹಾಗೂ ಕಾರ್ಯಕರ್ತರು,ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top