Slide
Slide
Slide
previous arrow
next arrow

ಗ್ರಾಮ ಅರಣ್ಯ ಸಮಿತಿಯಿಂದ ಮೌಳಂಗಿ ಇಕೋ ಪಾರ್ಕ್ ರಸ್ತೆ ದುರಸ್ತಿ

300x250 AD

ಜೋಯಿಡಾ : ತಾಲ್ಲೂಕಿನ ಮೌಳಂಗಿಯ ಗ್ರಾಮ ಅರಣ್ಯ ಸಮಿತಿಯ ಆಶ್ರಯದಡಿ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ನವಗ್ರಾಮದಿಂದ ಮೌಳಂಗಿ‌ ಇಕೋ ಪಾರ್ಕ್ ವರೆಗಿನ ರಸ್ತೆ ದುರಸ್ತಿ ಕಾಮಗಾರಿಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಪಾಲಿಸಿದರೆ ಪಾಲು ಎಂಬ ನಿಯಮದಂತೆ ನವಗ್ರಾಮದಿಂದ ಮೌಳಂಗಿ ಇಕೋ ಪಾರ್ಕಿಗೆ ಹೋಗುವ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಉಪ ವಲಯಾರಣ್ಯಾಧಿಕಾರಿ ಆನಂದ್ ರಾಥೋಡ, ಗ್ರಾಮ‌ ಅರಣ್ಯ ಸಮಿತಿಯ ಅಧ್ಯಕ್ಷರಾದ ವಿನೋದ್ ಮೈನಾಗೋಳ, ಫಾರೆಸ್ಟರ್ ವೀರೇಶ್, ಪ್ರಮುಖರಾದ ಧರ್ಮರಾಜ ಥೋರವತ್ ಹಾಗೂ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top