Slide
Slide
Slide
previous arrow
next arrow

ಪ್ರೂಟ್ಸ್ ನಲ್ಲಿ ನೋಂದಾಯಿಸಿ ಬರ ಪರಿಹಾರ ಪಡೆಯಿರಿ: ಡಿಸಿ ಸೂಚನೆ

300x250 AD

ಕಾರವಾರ: ಪ್ರಸಕ್ತ  ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ (ಭತ್ತ , ಮೆಕ್ಕೆಜೋಳ, ಕಬ್ಬು, ಹತ್ತಿ) ಪರಿಹಾರವನ್ನು ಸಂಬಂಧಪಟ್ಟ ರೈತರ ಖಾತೆಗೆ ಪಾವತಿಸಬೇಕಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಒಟ್ಟು  5,92,928 ಪ್ಲಾಟ್‌ಗಳಲ್ಲಿ 4,60,880 ಪ್ಲಾಟ್‌ಗಳನ್ನು ಈಗಾಗಲೇ FRUITS ತಂತ್ರಾಂಶದಲ್ಲಿ ಸಂಬಂಧಪಟ್ಟ ರೈತರ FID ಯನ್ನು ಸೃಜಿಸಲಾಗಿರುತ್ತದೆ.

ಬಾಕಿ ಉಳಿದ 1,32,048 ಪ್ಲಾಟ್‌ಗಳ ರೈತರು ಆಧಾರ ಕಾರ್ಡ, ಪಹಣಿ ಪತ್ರಿಕೆ ಬ್ಯಾಕ್ ಖಾತೆಗಳನ್ನು ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಕಂದಾಯ ಇಲಾಖೆ, ಕೃಷಿ ಇಲಾಖೆ, ರೇಷ್ಮೇ ಇಲಾಖೆ, ತೋಟಗಾರಿಕೆ ಇಲಾಖೆಯ ಕಚೇರಿಗಳಲ್ಲಿ ನೇರವಾಗಿ ಸಂಪರ್ಕಿಸಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಎಲ್ಲಾ ರೈತರಲ್ಲಿ ಕೋರಲಾಗಿದೆ.

 ಬರ ಪರಿಹಾರದ ಮೊದಲನೇ ಹಂತದಲ್ಲಿ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲು ಕ್ರಮವಹಿಸಲಾಗುತ್ತಿದ್ದು, ಸದ್ರಿ ವಿಷಯಕ್ಕೆ ಸಂಬಂಧಿಸಿದಂತೆ ರೈತರಲ್ಲಿ ಯಾವುದಾದರು ದೂರುಗಳು ಇದ್ದಲ್ಲಿ ನೇರವಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ತಮ್ಮ ದೂರನ್ನು ದಾಖಲಿಸಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ  ಗಂಗೂಬಾಯಿ ಮಾನಕರ ತಿಳಿಸಿದ್ದಾರೆ. 

300x250 AD

1 ಕಾರವಾರ Tel:+9108382223350
2 ಅಂಕೋಲಾ Tel:+9108388230243
3 ಕುಮಟಾ Tel:+9108386222054
4 ಭಟ್ಕಳ Tel:+9108385226422
5 ಶಿರಸಿ Tel:+9108384226383
6 ಸಿದ್ದಾಪುರ Tel:+9108389230127
7 ಯಲ್ಲಾಪುರ Tel:+919902571927
8 ಮುಂಡಗೋಡ Tel:+9108301222122
9 ಹಳಿಯಾಳ Tel:+9108284220134
10 ಜೋಯಡಾ Tel:+9108284282723
11 ದಾಂಡೇಲಿTel:+9108284295959

Share This
300x250 AD
300x250 AD
300x250 AD
Back to top