Slide
Slide
Slide
previous arrow
next arrow

ಜ.17ಕ್ಕೆ ‘ಸ್ವರಾಂಜಲಿ ಕಾರ್ಯಕ್ರಮ’

300x250 AD

ಶಿರಸಿ: ದಿ|| ವಿದ್ವಾನ ಮಹಾರುದ್ರಪ್ಪ  ಸ್ಥಾಪಿಸಿ ಬೆಳೆಸಿದ ಶ್ರೀ ಅರುಣೋದಯ ಕಲಾನಿಕೇತನ ಸಂಗೀತ ವಿದ್ಯಾಲಯದಲ್ಲಿ ಸಂಗೀತ ವಿದುಷಿ ಡಾ|| ಸುಲಭಾ ದತ್ ನೀರಲಗಿ ಸ್ಮರಣಿಕೆಯಲ್ಲಿ ಸ್ವರಾಂಜಲಿ ಕಾರ್ಯಕ್ರಮವನ್ನು ಜ.17ರ ಬುಧವಾರದಂದು ಮಧ್ಯಾಹ್ನ 3-30 ಕ್ಕೆ  ಹೊಟೆಲ್‌ ಸಾಮ್ರಾಟ್ ಎದುರಿನ ನೆಮ್ಮದಿ ಕುಟೀರದ ರಂಗಧಾಮದಲ್ಲಿ ಆಯೋಜಿಸಲಾಗಿದೆ.

ಅರುಣೋದಯ ಕಲಾನಿಕೇತನ ಸಂಗೀತ ವಿದ್ಯಾಲಯ ಶಿರಸಿಯ ಅಧ್ಯಕ್ಷರಾದ ಪಂ|| ಎಸ್. ಯು. ಪೋತದಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. , ಕೆ.ಜಿ.ಐಡಿ ನಿವೃತ್ತ ಜಿಲ್ಲಾ ಆಫೀಸರ್ ದತ್ತಾ ನೀರಲಗಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅತಿಥಿಗಳಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕ ಡಾ|| ರಾಮಚಂದ್ರ ಕೆ. ಎಂ. ಪಾಲ್ಗೊಳ್ಳಲಿದ್ದಾರೆ.

ಈ ಸಂಗೀತೋತ್ಸವದಲ್ಲಿ ಗಾಯಕರಾಗಿ ವಿದುಷಿ ಸುಷ್ಮಾ ಹೆಗಡೆ, ಇಸಳೂರು, ವಿದುಷಿ ವಿಂದ್ಯಾ ನಟರಾಜ ಮಂಗಳೂರು, ಬನವಾಸಿ, ತಬಲಾದಲ್ಲಿ ರಾಮದಾಸ ಭಟ್ ಹಾಗೂ ಸಂವಾದಿನಿ ಅಜಯ ಹೆಗಡೆ, ವರ್ಗಾಸರ ಭಾಗಹಿಸಲಿದ್ದಾರೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಶ್ರೀ ಅರುಣೋದಯ ಕಲಾನಿಕೇತನದ ಪ್ರಾಚಾರ್ಯರಾದ ಸಂಜೀವ ಪೋತದಾರ, ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದದವರು ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top