Slide
Slide
Slide
previous arrow
next arrow

ದೇವಾಲಯ ಒಡೆದು ಕಟ್ಟಿದ ಮಸೀದಿಯನ್ನು ಹಿಂದೂ ಸಮಾಜ ಕಿತ್ತು ಹಾಕುತ್ತದೆ; ಫೈರ್ ಬ್ರ್ಯಾಂಡ್ ಅನಂತಕುಮಾರ

300x250 AD

ಕುಮಟಾ: ಭಟ್ಕಳ, ಶಿರಸಿ ಹಾಗೂ ಶ್ರೀರಂಗಪಟ್ಟಣದಲ್ಲಿ ಇರುವ ಮಸೀದಿಗಳು ಹಿಂದೊಮ್ಮೆ ದೇವಸ್ಥಾನಗಳೇ ಆಗಿದ್ದವು. ಇದನ್ನು ಥ್ರೆಟ್‌ ಅಂತ ಬೇಕಾದರೂ ಅಂದುಕೊಳ್ಳಲಿ ಈ ಮಸೀದಿಗಳನ್ನು ಕಿತ್ತು ಹಾಕುವವರೆಗೆ ಹಿಂದೂ ಸಮಾಜ ಕುಳಿತುಕೊಳ್ಳಲಾರದು ಎಂದು ಹಿಂದೂ ಫೈರ್ ಬ್ರ್ಯಾಂಡ್ ಸಂಸದ ಅನಂತಕುಮಾರ ಬೆಂಕಿಯುಗಳಿದ್ದಾರೆ.

ಕುಮಟಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಭಟ್ಕಳದ ಚಿನ್ನದಪಳ್ಳಿಯ ಮಸೀದಿ ಹಿಂದೂ ದೇವಸ್ಥಾನವಾಗಿತ್ತು. ಶಿರಸಿಯ ಸಿಪಿ ಬಜಾರ್‌ನಲ್ಲಿರುವ ದೊಡ್ಡ ಮಸೀದಿಯೇನಿದೆ ಅದು ವಿಜಯ ವಿಠ್ಠಲ ದೇವಸ್ಥಾನವಾಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನ, ಇವತ್ತು ಹೋದರೂ ಅಲ್ಲಿ ಮಾರುತಿ ಮೂರ್ತಿ ಕಾಣುತ್ತದೆ. ದೇಶದ ಮೂಲೆ ಮೂಲೆಗಳಲ್ಲಿ, ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡ ಸಂಕೇತಗಳಿವೆ. ಅದನ್ನು ಕಿತ್ತು ಹಾಕುವ ತನಕ ಹಿಂದೂ ಸಮಾಜ ಮತ್ತೆ ವಾಪಾಸ್ ಕುಳಿತುಕೊಳ್ಳಲ್ಲ. ನಮಗೇನೂ ಮುಲಾಜು ಗಿಲಾಜು ಇಲ್ಲ, ಪತ್ರಿಕೆಯವರು ನೇರವಾಗಿ ಬರೆದುಕೊಳ್ಳಲಿ, ಕೆಲವರು ಇದನ್ನು ಥ್ರೆಟ್ ಅಂತಾನೂ ಅಂದುಕೊಳ್ಳಲಿ. ನಾವು ಮಾಡೋದು ಗ್ಯಾರಂಟಿಯೇ. ಇದು ಹಿಂದೂ ಸಮಾಜದ ತೀರ್ಮಾನ, ಅನಂತ ಕುಮಾರ್ ಹೆಗಡೆಯ ತೀರ್ಮಾನವಲ್ಲ ಎಂದು ಹೇಳಿದ್ದಾರೆ.

ರಣಭೈರವ ಎದ್ದಾಗಿದೆ, ಮತ್ತೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಸೇಡು, ಸೇಡು, ಸೇಡು… ಸಾವಿರ ವರ್ಷದ ಸೇಡು ತೀರಿಸಿಕೊಳ್ಳದಿದ್ರೆ ಇದು ಹಿಂದೂ ರಕ್ತವಲ್ಲ ಎಂದು ಹಿಂದೂ ಸಮಾಜ ಹೇಳುತ್ತಿದೆ. ನಮ್ಮದು ಋಣವಿಟ್ಟುಕೊಂಡಿರುವ ಸಮಾಜವಲ್ಲ, ಋಣವನ್ನು ತೀರಿಸಿಯೇ ತೀರಿಸ್ತೇವೆ. ಸಾವಿರ ವರ್ಷಗಳ ಋಣವಿದೆ ನಮಗೆ, ಅದನ್ನು ತೀರಿಸದೇ ಸುಮ್ಮನೆ ಕುಳಿತರೆ ಅದಕ್ಕೆ ಹಿಂದೂ ರಕ್ತ ಅಂತಾ ಕರಿಯೋದೆ ಇಲ್ಲ ರಾಮಜನ್ಮಭೂಮಿಯ ಜತೆ ಮೊದಲ ಪ್ರಾರಂಭ ಶುರುವಾಗಿದೆ. ಇಡೀ ಹಿಂದೂ ಸಮಾಜವನ್ನು ಜಾತಿ, ಪ್ರಾದೇಶಿಕ, ಭಾಷೆ ಹೆಸರಿನಲ್ಲಿ ಒಡೆದರು. ಮೂರ್ಖರಾಮಯ್ಯನಂತವರು (ಸಿದ್ದರಾಮಯ್ಯ) ಇನ್ನೂ ಒಡೆಯುತ್ತಲೇ ಇದ್ದಾರೆ. ಆದರೂ ಇಂದು ಹಿಂದೂ ಸಮಾಜ ಒಟ್ಟಾಗಿ ನಿಂತುಕೊಂಡಿದೆ. ಹೊಸ ಗೆಲುವನ್ನು ಮುಂದಿನ ಶತಮಾನದಲ್ಲಿ  ಕಾಣುವಂತಾಗಬೇಕು ಎಂದು ಹೇಳಿದ್ದಾರೆ.

ಪುನರ್‌ ಜನ್ಮ ಕೂಡ ಸಿಗಬಾರದು: ಈ ಬಾರಿ ಗೆಲವು ಹೇಗಿರಬೇಕೆಂದರೆ,  ಅದನ್ನು ಮುಂದೆ ಅಳಿಸಲು ನಮ್ಮಿಂದಲೂ ಆಗಬಾರದು ಎಂದು ಅಮಿತ್ ಶಾ ಹೇಳಿದ್ದರು. ಹೊಡೆದ ಹೊಡೆತ ಹೇಗಿರಬೇಕೆಂದರೆ, ಅವನಿಗೆ ಪುನರ್‌ಜನ್ಮ ಕೂಡ ಸಿಗಬಾರದು. ಈ ಜನ್ಮ ಅಂತೂ ಕಳೆದು ಹೋಗುತ್ತೆ, ಮುಂದಿನ ಜನ್ಮದಲ್ಲೂ ಅವನು ಇವತ್ತೇ ಸಾಯಬೇಕು. ಈ ರೀತಿಯ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು. ಕಾಂಗ್ರೆಸ್ ನಮ್ಮ ವಿರೋಧಿಯಲ್ಲ, ಕಾಂಗ್ರೆಸಿಗೆ ನಮ್ಮನ್ನು ವಿರೋಧ ಮಾಡುವ ಕೆಪಾಸಿಟಿಯೂ ಇಲ್ಲ. ನಮ್ಮ ವಿರೋಧಿಗಳು ನಮ್ಮ ತಲೆಯಲ್ಲಿ ಹುಚ್ಚು ಹುಳವನ್ನು ಬಿಡ್ತಾರೆ. ಹಿಂದುತ್ವದ ವಿರೋಧಿ ಹುಳಗಳು, ಸನಾತನದ ವಿರೋಧಿ ಹುಳಗಳೇ ನಮ್ಮ ವಿರೋಧಿಗಳು ಎಂದು ಹೇಳಿದ್ದಾರೆ.

300x250 AD

ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೇ ಅಲ್ಲ, ರಾಜಕಾರಣಕ್ಕೋಸ್ಕರ ಒದರಾಡ್ತಿದೆಯಷ್ಟೇ. ನಮ್ಮ ವಿರೋಧಿ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಅಲ್ಲ. ಗತಿಗೆಟ್ಟ ಮಾನಸಿಕತೆ, ಹರಾಜಾಗಿರುವ ಅಲ್ಪಸಂಖ್ಯಾತರ ಓಟಿಗೆ ಹರಾಜಾಗಿ ಹೋಗಿರುವ ಮಾನಸಿಕತೆ ನಮ್ಮ ವಿರೋಧ. ರಾಜಕೀಯ ನಮ್ಮ ವಿರೋಧವಲ್ಲ, ಡೆಮಾಕ್ರಸಿಯಲ್ಲಿ ಒಂದು ಪಕ್ಷ ಬರುತ್ತೆ, ಒಂದು ಪಕ್ಷ ಹೋಗುತ್ತೆ, ಅದು ಸ್ವಾಭಾವಿಕ. ನಾಳೆ ನಾವೇನು ಪರ್ಮನೆಂಟ್ ಇರೋದಿಲ್ಲ, ಮತ್ತೊಂದು ಪಕ್ಷ ಬರುತ್ತೆ. ಆದರೆ, ಗತಿಗೆಟ್ಟ ಮಾನಸಿಕತೆಗೆ ನಮ್ಮ ವಿರೋಧವಿದೆ, ಅಹಿಂದು ಮಾನಸಿಕತೆ ಅದು ನಮ್ಮ ವಿರೋಧ. ರಾಮಜನ್ಮ ಭೂಮಿ ಆಹ್ವಾನ ಪತ್ರಿಕೆ ನಮಗೆ ಬಂದಿಲ್ಲ ಎಂದಿದ್ದರು. ಆಮೇಲೆ ಬಂದರೂ ನಾವು ಹೋಗುವುದಿಲ್ಲ ಎಂದರು. ನೀನು ಬರ್ಲಿ ಬಿಡು, ರಾಮಜನ್ಮಭೂಮಿ ನಿಲ್ಲುವುದಿಲ್ಲ ಮಗನೇ.. ಬಳಿಕ ಹೇಳ್ತಾರೆ ಅಯೋಧ್ಯೆಗೆ ಹೋಗ್ತೇನೆ, ಅವತ್ತು ಹೋಗಲ್ಲ, ಆಮೇಲೆ ಹೋಗ್ತೀನಿ ಅಂತಾ. ಇದು ಹಿಂದೂ ಸಮಾಜದ ತಾಕತ್ತು, ಕೇವಲ 8 ದಿನಗಳಲ್ಲಿ ಇವರ ಧ್ವನಿ ಬದಲಾಯಿತು. ಮೊದಲು ಇನ್ವಿಟೇಶನ್ ಬಂದಿಲ್ಲ ಅಂದ್ರು, ಆಮೇಲೆ ಬಂದ್ರೂ ಹೋಗಲ್ಲ ಅಂದ್ರು, ನಂತ್ರ ಹೋಗ್ತೀನಿ ಅಂತಿದ್ದಾರೆ ಇದು ಹಿಂದೂ ಸಮಾಜದ ಧಮ್ ಎಂದು ಹೇಳಿದ್ದಾರೆ.

ಶಾಸಕ ದಿನಕರ ಶೆಟ್ಟಿಮಾತನಾಡಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವಂತೆ ನಾನು ವೈಯಕ್ತಿಕವಾಗಿ ಹೆಗಡೆಯವರಿಗೆ ಹಲವು ಬಾರಿ ವಿನಂತಿಸಿದ್ದೇನೆ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಅವರ ಮಾತಿನಲ್ಲಿ ಹೇಳಬೇಕೆಂದರೆ ಅಭಿವೃದ್ಧಿ ಎಂದರೆ ಕೇವಲ ರಸ್ತೆ ನೀರು ಮಾತ್ರವಲ್ಲ ಎಂದಿದ್ದಾರೆ. ನಾನು ಸಹ ನಮ್ಮ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂಸದರು ಅವರ ಅವಧಿಯಲ್ಲಿ ಯಾರಿಗೂ ತೊಂದರೆ ಮಾಡಿಲ್ಲ ಇದು ಬಹಳ ಮುಖ್ಯ, ಜಿಲ್ಲೆಗೆ ಅವರು ತಂದ ಅನೇಕ ಯೋಜನೆಗಳು ಪರಿಸರವಾದಿಗಳು ಮತ್ತಿತರ ಕಾರಣಕ್ಕಾಗಿ ನಿಂತಿದೆ. ಅನಂತಕುಮಾರ್ ಹೆಗಡೆ ರವರು ಮತ್ತೆ ಸಂಸದರಾದರೆ ಮಾತ್ರ ಅಭಿವೃದ್ಧಿ ಸಾಧ್ಯ.ಕಾಂಗ್ರೆಸ್ ನಮ್ಮ ಸಂಸದರು ನಿಲ್ಲುವ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಅವರು ನಿಲ್ಲದಿದ್ದರೆ ಮಾತ್ರ ಕಾಂಗ್ರೆಸ್ ನಲ್ಲಿ ನೂರಾರು ಆಕಾಂಕ್ಷಿಗಳು ಎದ್ದೇಳುತ್ತಾರೆ. ಕೆ.ಜಿ.ನಾಯ್ಕ ಹಣಜೀಬೈಲ್‌ ಮಾತನಾಡಿ, 1993ರಲ್ಲಿ ಹಿಂದೂ ಜಾಗರಣ ವೇದಿಕೆಯ ಮೂಲಕ ಅನಂತಕುಮಾರ ಹೆಗಡೆ ಭಟ್ಕಳಕ್ಕೆ ಕಾಲಿಡುವವರೆಗೆ ನಮಗೆ ನಾಯಕತ್ವದ ಕೊರತೆ ಇತ್ತು. ಇವರು ಕಾಲಿಟ್ಟ ನಂತರ ಭಟ್ಕಳದಲ್ಲಿ ಹಿಂದುಗಳ ನರಮೇಧ ನಿಂತಿತು. ಜಿಲ್ಲೆಯ ಜನ ರಾಷ್ಟ್ರೀಯ ವಿಚಾರ ಮತ್ತು ಹಿಂದುತ್ವದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅನಂತಕುಮಾರ್ ಅವರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಕೆಲವು ದಿನಗಳಿಂದ ಅವರು ಕ್ಷೇತ್ರದಲ್ಲಿ ಓಡಾಡಿಲ್ಲ. ಆದರೆ ದೇಶದ್ರೋಹಿಗಳ ಜೊತೆ ಎಂದೂ ಕರ್ಜೂರ ತಿಂದವರಲ್ಲ. ಅನಂತಕುಮಾರ ಅವರೇ ನಮ್ಮ ಸಂಸದರಾಗಬೇಕೆಂಬುದು ನಮ್ಮೆಲ್ಲರ ಆಶಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕುಮಟಾ ಮಂಡಲಾಧ್ಯಕ್ಷ ಹೇಮಂತ ಗಾಂವಕರ, ಎನ್.ಎಸ್.ಹೆಗಡೆ, ಕುಮಾರ್ ಮಾರ್ಕಾಂಡೇಯ, ನಾಗರಾಜ ನಾಯಕ ತೊರ್ಕೆ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top