ಶಿರಸಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರ ಮಧ್ಯಾಹ್ನದ ವೇಳೆ ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಸರಕಾರಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಸಮಗ್ರವಾಗಿ ತಿಳಿ ಹೇಳಲಾಯಿತು. ಪ್ರತಿದಿವಸ ಹೆಚ್ಚುತ್ತಿರುವ ಅಪಘಾತಗಳಿಗೆ ಪ್ರಮುಖ ಕಾರಣಗಳನ್ನು ಮತ್ತು ಪರಿಹಾರಗಳನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಮಾರಿಕಾಂಬಾ ಆಸ್ಪತ್ರೆಯ ಡಾ. ಮಮತಾ ಹೆಗಡೆ, ಡಾಕ್ಟರ್ ಸುಮನ್ ಹೆಗಡೆ. ಶಿರಸಿ ಮತ್ತು ರೋಟರಿಯನ್ ಅನಂತ ಪದ್ಮನಾಭ, ಪೋಲಿಸ್ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಮುಚ್ಚಂಡಿ, ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ನಾರಾಯಣ ಶಿರಾಲಿ ಪ್ರಾಂಶುಪಾಲರಾದ ಮತ್ತು ಉಪನ್ಯಾಸಕ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ರಮೇಶ್ ಮುಚ್ಚಂಡಿ, ರೋಟೋರಿಯನ್ ಅನಂತ ಪದ್ಮನಾಭ ಇವರು ರಸ್ತೆ ಸುರಕ್ಷತಾ ನಿಯಮದ ಬಗ್ಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಿವರವಾಗಿ ತಿಳಿಹೇಳಿದರು.