Slide
Slide
Slide
previous arrow
next arrow

ಹೊನ್ನಾವರ ಲಿಯೋ ಕ್ಲಬ್‌ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ

300x250 AD

ಹೊನ್ನಾವರ:ತಾಲೂಕಿನ ಕುಳಕೋಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಿಯೋ ಕ್ಲಬ್‌ನ ಸಹಕಾರದಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಹೊನ್ನಾವರದ ಖ್ಯಾತ ದಂತ ವೈದ್ಯರಾದ ಲಯನ್ ಡಾ| ನಾಗರಾಜ ಭೋಸ್ಕಿ ಮತ್ತು ಡಾ| ಸಹನಾ ಶಿಬಿರವನ್ನು ನಡೆಸಿಕೊಟ್ಟರು. ಡಾ| ನಾಗರಾಜ ಭೋಸ್ಕಿ ವಿದ್ಯಾರ್ಥಿಗಳಿಗೆ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸೂಕ್ತ ಮಾಹಿತಿ ನೀಡಿದರು. ಎಲ್ಲ ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಯೋ ಅಧ್ಯಕ್ಷ ಸಂದೇಶ ನಾಯ್ಕ ವಹಿಸಿದರು. ಲಿಯೋ ಸಲಹೆಗಾರರಾದ ರಾಜೇಶ ಸಾಳೇಹಿತ್ತಲ ಕಾರ್ಯಕ್ರಮದ ಕುರಿತು ಮಾತನಾಡಿದರು. ಲಿಯೋ ಕಾರ್ಯದರ್ಶಿ ಚಂದನ ಮೇಸ್ತ, ಖಜಾಂಚಿ ಕೀರ್ತಿ ಆಗಮಿಸಿದ್ದರು. ಲಿಯೋನ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಗೌರಿ ಭಟ್ಟ ಎಲ್ಲರನ್ನು ಸ್ವಾಗತಿಸಿ, ನಂತರ ವಂದಿಸಿದರು. ಡಾ| ನಾಗರಾಜ ಭೋಸ್ಕಿ ಇವರು ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ಮತ್ತು ಬ್ರಶ್ ವಿತರಿಸಿದರು.

300x250 AD
Share This
300x250 AD
300x250 AD
300x250 AD
Back to top