Slide
Slide
Slide
previous arrow
next arrow

ಎಂಜಿಸಿ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಯುವ ಸಪ್ತಾಹ’ ಕಾರ್ಯಕ್ರಮ

300x250 AD

ಸಿದ್ದಾಪುರ: ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ., ಎನ್.ಎಸ್.ಎಸ್.ಘಟಕ, ವಿದ್ಯಾರ್ಥಿ ಸಂಸತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಪತ್ರಿಕಾ ಜನ್ಮ ದಿನಾಚರಣೆಯ ಪ್ರಯುಕ್ತ “ ರಾಷ್ಟ್ರೀಯ ಯುವ ಸಪ್ತಾಹ”ದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಎನ್.ಎಸ್.ಎಸ್.ಘಟಕದ ಯೋಜನಾಧಿಕಾರಿಗಳು ಮತ್ತು ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷರಾದ ಡಾ. ದೇವನಾಂಪ್ರಿಯ ಎಂ. ಇವರು ವಿಶೇಷ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರು ವೇದ, ವೇದಾಂತ, ಉಪನಿಷತ್ತು, ಆಧ್ಯಾತ್ಮದ ಮೂಲಕ ಪಡೆದ ಅಪರಿಮಿತವಾದ ಜ್ಞಾನವನ್ನು ಪ್ರಸ್ತುತ ಕಾಲಕ್ಕೆ ಅನುಸಂಧಾನಗೊಳಿಸಿದ್ದರು. ಆಧುನಿಕ ಕಾಲಘಟ್ಟದ ಚಿಂತನೆಗಳನ್ನು ಭವಿತವ್ಯದ ಭಾರತ ಅನ್ವಯಿಸಿ ಹೊಸ ಭಾರತದ ಕಲ್ಪನೆಯನ್ನು ಜಗತ್ತಿಗೆ ನೀಡಿದ್ದರು. ಅವರ ಚಿಂತನೆಗಳು ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಿವೆ ಎಂದರು. ಪ್ರಾಚಾರ್ಯರಾದ ಡಾ. ಸುರೇಶ ಎಸ್. ಗುತ್ತಿಕರ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಸುಲೋಚನಾ ಸುಖಸಾರೆ ಉಪಸ್ಥಿತರಿದ್ದರು. ಕು. ಅಂಜುಮ್ ಸಾಬ್ ಸ್ವಾಗತಿಸಿದರು. ಕು. ಆಶಿತಾ ಗೌಡರ್ ನಿರೂಪಿಸಿದರು. ಕು. ಅನನ್ಯಾ ಗೌಡರ್ ವಂದಿಸಿದರು. ಕು. ಪ್ರೀತಿ ಗೌಡರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ಮಹಾವಿದ್ಯಾಲಯದ ೦೬ ವಿದ್ಯಾರ್ಥಿನಿಯರು ಭಾಷಣ ಮಾಡಿದರು. ಎನ್.ಎಸ್.ಎಸ್. ಘಟಕದ ವತಿಯಿಂದ ಕಾಲೇಜು ಆವರಣದಲ್ಲಿ ಶ್ರಮದಾನವನ್ನು ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆರ್ಥಪೂರ್ಣವಾಗಿ ಆಚರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top