Slide
Slide
Slide
previous arrow
next arrow

ಬಿಟ್ಟಿ ಭಾಗ್ಯದಿಂದ ಕರ್ನಾಟಕದ ಆರ್ಥಿಕ ಸ್ಥಿತಿ ಕಂಗೆಟ್ಟಿದೆ: ಸೂಲಿಬೆಲೆ

300x250 AD

ಸಿದ್ದಾಪುರ: ಕೇವಲ ಉಚಿತವಾಗಿ ನೀಡುವಂತಹ ವಸ್ತುಗಳ ಆಸೆಯಿಂದ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿರುವುದು ದುರಂತದ ಸಂಗತಿ. ಕರ್ನಾಟಕ ಸರ್ಕಾರದ ಬಿಟ್ಟಿ ಭಾಗ್ಯದಿಂದ ರಾಜ್ಯದ ಆರ್ಥಿಕ ಸ್ಥಿತಿ ಕಂಗೆಟ್ಟಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತಾಲ್ಲೂಕಿನ ಬಿಳಗಿಯಲ್ಲಿ ನಮೋ ಬ್ರಿಗೇಡ್ ಸಿದ್ದಾಪುರ ಹಮ್ಮಿಕೊಂಡ ನಮೋ ಭಾರತ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿ ಗುರುವಾರ ಮಾತನಾಡಿದರು. ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಉಪಯೋಗಿಸಿ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಜನರನ್ನು ಜಾಗೃತಗೊಳಿಸಿ ರಾಷ್ಟ್ರದಲ್ಲಿ ಮೋದಿ ಸರ್ಕಾರದ ಮೊದಲಿನ ಭಾರತಕ್ಕೂಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈಗಿನ ಭಾರತದ ನಡುವಿನ ವ್ಯತ್ಯಾಸವನ್ನುಜನತೆಗೆ ಮನದಟ್ಟು ಮಾಡಲು ನಮೋ ಬ್ರಿಗೇಡ್ ಕೆಲಸ ಮಾಡುತ್ತಿದೆ. ಬೋಪೋರ್ಸ್ ದಿಂದ ಹಿಡಿದು ಅಗಸ್ತಾ ವೆಸ್ಟ್ಲ್ಯಾಂಡ್‌ ಡೀಲ್ ನಲ್ಲಿ ಕಿಕ್ ಬ್ಯಾಕ್ ಪಡೆಯುತ್ತಿದ್ದವರು ಮೋದಿಯನ್ನು ಕಳೆದ ೧೦ ವರ್ಷಗಳಿಂದ ವಿರೋಧಿಸುತ್ತಿದ್ದಾರೆ. ಈ ದೇಶದ ಕೆಲವೇ ಕೆಲವು ಕೋಟಿ ಜನ ಕಾಂಗ್ರೆಸ್ ಗೆ ಮತ ಹಾಕುವವರಿದ್ದರೆ ನೂರಾರು ಕೋಟಿ ಜನ ಮೋದಿಜಿಯವರನ್ನು ಹೃದಯದಲ್ಲಿಟ್ಟು ಪ್ರೀತಿಸುತ್ತಿದ್ದಾರೆ. ಕಳೆದ 500 ವರ್ಷಗಳಿಂದ ಆಗದ ರಾಮಮಂದಿರ ನರೇಂದ್ರ ಮೋದಿ ಅವಧಿಯಲ್ಲಿ ಆಗಿದೆ. ರಾಮ ಮಂದಿರ ನಿರ್ಮಾಣ ವಿರೋಧಿಸಿ ಕೋರ್ಟನಲ್ಲಿ ವಾದಿಸಲು ಕಾಂಗ್ರೆಸ್ 24 ವಕೀಲರನ್ನು ನೇಮಿಸಿತು. ಅದರ ಉಸ್ತುವಾರಿ ವಹಿಸಿಕೊಂಡವರೇ ಕಾಂಗ್ರೇಸ್ ನಾಯಕ ಕಪಿಲ್ ಸಿಬಲ್. ಆದರೆ ಬಿಜೆಪಿಯ ಪ್ರಯತ್ನದಿಂದ ಇಂದು ರಾಮಮಂದಿರ ನಿರ್ಮಾಣವಾಗಿದೆ. ನಮ್ಮ ದೇಶವನ್ನು ಕಡೆಗಣಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮೋದಿಯವರ ಸಮರ್ಥ ನಾಯಕತ್ವದ ಪರಿಣಾಮದಿಂದ ಇಂದು ರಾಜ ಮರ್ಯಾದೆ ನೀಡುತ್ತಿವೆ. ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಎಲ್ಲ ಗೊಂದಲಗಳನ್ನು ಬದಿಗಿಟ್ಟು ನಮ್ಮ ಅಭ್ಯರ್ಥಿ ಮೋದಿ ಎಂದು ಮತ ಹಾಕಿ ಮೋದಿಯನ್ನು ಗೆಲ್ಲಿಸಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸೋಣ ಎಂದರು.

300x250 AD

ಕಾರ್ಯಕ್ರಮದಲ್ಲಿ ರಾಮ ಮಂದಿರ ಕರಸೇವಕರಾದ ಲಕ್ಷ್ಮಣ ಲೋಬಿ, ಶ್ರೀಧರ ಬಿಕ್ಕಳಸೆ, ಗೋಪಾಲ ತಂಗಾರುಮನೆ, ಅನಂತ ಊರತೋಟ, ಹಳಿಯಾಳದ ಉಮೇಶ ಬಸಲಿಂಗಪ್ಪ ಬೊಳಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಬಿಳಗಿಯ ಶ್ರೀರಾಮ ಅಕ್ಕಿ ಗಿರಣಿ ಮಾಲಕರಾದ ದೇವದಾಸ್ ಪೈ ಉಪಸ್ಥಿತರಿದ್ದರು. ಕೇಶವ್ ಮೊಗೇರ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಜಿಲ್ಲಾರೈತ ಮೋರ್ಚಾ ಉಪಾಧ್ಯಕ್ಷ ಆದರ್ಶ ಪೈ ಬಿಳಗಿ ಸ್ವಾಗತಿಸಿದರು. ನಮೋ ಬ್ರಿಗೇಡ್‌ ಜಿಲ್ಲಾ ಸಂಚಾಲಕ ಅಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು.ಗಿರೀಶ ಆಲ್ಮನೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top