Slide
Slide
Slide
previous arrow
next arrow

ಜ.14ಕ್ಕೆ ಆಲೆಮನೆಯಲ್ಲಿ ರೇಖಾ ದಿನೇಶ ಗಾಯನ

300x250 AD

ಸಿದ್ದಾಪುರ: ತಾಲೂಕಿನ ಬಾನ್ಕುಳಿ ಮಠದ ಆವರಣದಲ್ಲಿ ಜ.14 ರಂದು ಆಲೆಮನೆ ಉತ್ಸವ ಕಾರ್ಯಕ್ರಮ ಜರುಗಲಿದ್ದು ಜನನಿ ಮ್ಯೂಸಿಕ್ ಸಂಸ್ಥೆ ವತಿಯಿಂದ ಭಾನುವಾರ ಮಧ್ಯಾಹ್ನ 4.30ರಿಂದ ಶಾಸ್ತ್ರೀಯ ಸಂಗೀತ ಹಾಗೂ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನನಿ ಕರೋಕೆ ಕಲಾವಿದರುಗಳಿಂದ ಚಲನಚಿತ್ರ ಗೀತೆಗಳು ಪ್ರಸ್ತುತಗೊಳ್ಳಲಿದೆ.

ಸಂಜೆ 7 ಗಂಟೆಗೆ ಹಾರ್ಮೋನಿಯಂ ಸೋಲೊ ಖ್ಯಾತ ಹಾರ್ಮೋನಿಯಂ ವಾದಕ ಸಾರಂಗ್ ಕುಲಕರ್ಣಿ ಬೆಳಗಾವಿ ಇವರಿಂದ ಕಾರ್ಯಕ್ರಮದ ಕೊನೆಯಲ್ಲಿ ರೇಖಾ ದಿನೇಶ್ ಶಿರಸಿ ಅವರಿಂದ ಗಾಯನ ಕಾರ್ಯಕ್ರಮ ತಬಲಾದಲ್ಲಿ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ಹಾರ್ಮೋನಿಯಂನಲ್ಲಿ ಸಾರಂಗ್ ಕುಲಕರ್ಣಿ, ರಿದಂ ಪ್ಯಾಡ್ ನಲ್ಲಿ ಕಿರಣ ಹೆಗಡೆ ಕಾನಗೋಡು ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇದ್ದು ಹಾಲಿನ ಸವಿಯೊಂದಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಜನನಿ ದಿನೇಶ ಹೆಗಡೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top