Slide
Slide
Slide
previous arrow
next arrow

ಜ.13ಕ್ಕೆ ಸಾಲ್ಕಣಿಯಲ್ಲಿ ಸಾಂಸ್ಕೃತಿಕ ಸಂಭ್ರಮ: ರಸಮಂಜರಿ, ನಾಟಕ ಪ್ರದರ್ಶನ

300x250 AD

ಶಿರಸಿ: ತಾಲೂಕಿನ ಸಾಲ್ಕಣಿಯ ನವೋದಯ ಗೆಳೆಯರ ಬಳಗ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮ, ಸನ್ಮಾನ, ರಸಮಂಜರಿ, ನಾಟಕ, ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಜ.13, ಶನಿವಾರದಂದು ಆಯೋಜಿಸಲಾಗಿದೆ.

ಬೆಳಗ್ಗೆ 10 ಘಂಟೆಯಿಂದ ‘ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಸಂಜೆ 6.00 ಘಂಟೆಯಿಂದ ಮನರಂಜನಾ ಕಾರ್ಯಕ್ರಮ ಪ್ರಾರಂಭವಾಗಲಿದೆ. 7 ಘಂಟೆಯ ಸಭಾ ಕಾರ್ಯಕ್ರಮದ ನಂತರ ಕನ್ನಡ ಕೋಗಿಲೆಯ ಅರ್ಜುನ ಇಟಗಿ, ಇಂಚರ ಹೊನ್ನಾವರ ಹಾಗೂ ಫ್ರೆಂಡ್ಸ್ ಮೆಲೊಡೀಸ್, ಭಟ್ಕಳ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

300x250 AD

ನಂತರದಲ್ಲಿ ದಿ. ಕಮಲಾಕರ ನಾಯ್ಕ, ತೆಪ್ಪಗಿ ಇವರ ಸವಿನೆನಪಿಗಾಗಿ ಉತ್ತರ ಕನ್ನಡದ ಖ್ಯಾತ ರಂಗಭೂಮಿ ಕಲಾವಿದರಿಂದ ಸಾಮಾಜಿಕ ನಾಟಕ ‘ಸಾವು ತಂದ ಸೌಭಾಗ್ಯ’ ಪ್ರದರ್ಶನಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top