Slide
Slide
Slide
previous arrow
next arrow

ದಾಂಡೇಲಿಗೆ ಪರ್ತಗಾಳಿ ಶ್ರೀ ಆಗಮನ: ಭವ್ಯ ಮೆರವಣಿಗೆ

300x250 AD

ದಾಂಡೇಲಿ: ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮ ಪೂಜ್ಯ ಗುರುವರ್ಯ ಶ್ರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಗುರುವಾರ ಸಂಜೆ ದಾಂಡೇಲಿ ನಗರಕ್ಕೆ ಆಗಮಿಸಿದರು.

ನಗರಕ್ಕೆ ಆಗಮಿಸಿದ ಪೂಜ್ಯ ಸ್ವಾಮೀಜಿಯವರನ್ನು ನಗರದ ಸೋಮಾನಿ ವೃತ್ತದಲ್ಲಿ ಭಕ್ತಿ ಪೂರ್ವಕವಾಗಿ ಸ್ವಾಗತಿಸಲಾಯಿತು. ಸೋಮಾನಿ ವೃತ್ತದಿಂದ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ಪೂಜ್ಯ ಸ್ವಾಮೀಜಿಯವರನ್ನು ಅಲಂಕೃತ ತೆರೆದ ವಾಹನದಲ್ಲಿ ಕರೆದೊಯ್ಯಲಾಯಿತು.

300x250 AD

ಮೆರವಣಿಗೆಯಲ್ಲಿ ವಿವಿಧ ಅಂದ ಚಂದದ ಗೊಂಬೆಗಳ ತಂಡ ಹಾಗೂ ಬ್ಯಾಂಡ್ ಸೆಟ್ ವಿಶೇಷ ಆಕರ್ಷಣೆಗೆ ಪಾತ್ರವಾಯಿತು. ಮಹಿಳೆಯರು ಪೂರ್ಣ ಕುಂಭ ಕಲಶ ದೊಂದಿಗೆ ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದರು. ಜಿಎಸ್‌ಬಿ ಸಮಾಜದ ಮಹಿಳೆಯರು ಹಾಗೂ ಪುರುಷರು ಭಕ್ತಿ ಭಾವುಕತೆಯ ಸಮವಸ್ತ್ರವನ್ನು ಧರಿಸಿ ಮೆರವಣಿಗೆಯಲ್ಲಿ‌ ಹೆಜ್ಜೆ‌ಹಾಕಿದರು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಎಸ್‌ಬಿ ಸಮಾಜ ಬಾಂಧವರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top