ಶಿರಸಿ: ನಗರದ ಸಂಹಿತಾ ಮ್ಯೂಸಿಕ್ ಫೋರಮ್‌ನ 14ನೇ ವಾರ್ಷಿಕ ವಿಶೇಷ ಸಂಗೀತ ಸಮ್ಮೇಳನವನ್ನು ನಗರದ ಯೋಗಮಂದಿರದಲ್ಲಿ ಜ.14ರಂದು ಏರ್ಪಡಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 9.45ರಿಂದ ಸಂಜೆ 3.30ಕ್ಕೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ. ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಭೀಮಣ್ಣ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ.ಎಮ್, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಜಿಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ನರೇಬೈಲ್‌ನ ಮಲೆನಾಡು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಎಲ್.ಎಮ್. ಹೆಗಡೆ ಗೋಳಿಕೊಪ್ಪ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಭಾಗವಹಿಸುವರು. ಸಂಹಿತಾ ಮ್ಯೂಸಿಕ್ ಫೋರಮ್‌ನ ಅಧ್ಯಕ್ಷ ಸುಬ್ರಾಯ ಹೆಗಡೆ ಕುಪ್ಪನಮನೆ ಅಧ್ಯಕ್ಷತೆ ವಹಿಸುವರು.
ಸಂಜೆ 5ಕ್ಕೆ ಕಾವ್ಯಶ್ರೀ ಅನಂತ ಹೆಗಡೆ ವಾಜಗಾರ ಗಾಯನ, ತಬಲಾ ವೃಂದ ವಾದನದಲ್ಲಿ ಅನಂತ ಹೆಗಡೆ ವಾಜಗಾರ್, ಯುವ ಕಲಾವಿದರಾದ ವಿವೇಕ ಹೆಗಡೆ, ಶ್ರೀಧರ ಗಾಂವಕರ್, ಪನ್ನಗ ಹೆಗಡೆ ಭಾಗವಹಿಸುವರು. ಸಂಜೆ 7ರಿಂದ ಹಿಂದುಸ್ತಾನೀ ಗಾಯನ ಹಾಗೂ ಬಾನ್ಸುರಿ ಜುಗಲ್ಬಂದಿ ನಡೆಯಲಿದ್ದು ಗಾಯನದಲ್ಲಿ ನಾಗಭೂಷಣ ಹೆಗಡೆ ಬಾಳೆಹದ್ದ, ಬಾನ್ಸುರಿ ವಾದನದಲ್ಲಿ ನಾಗರಾಜ ಹೆಗಡೆ ಶಿರನಾಲಾ, ತಬಲಾದಲ್ಲಿ ಅನಂತ ಹೆಗಡೆ ವಾಜಗಾರ್, ಹಾರ್ಮೋನೀಯಂನಲ್ಲಿ ಅಜೇಯ ಹೆಗಡೆ ಬೆಣ್ಣೆಮನೆ ಪಾಲ್ಗೊಳ್ಳುವರು. ಕಲಾಸಕ್ತರು ಪಾಲ್ಗೊಳ್ಳುವಂತೆ ಸಂಹಿತಾ ಮ್ಯೂಸಿಕ್ ಫೋರಮ್ ಪ್ರಕಟಣೆ ತಿಳಿಸಿದೆ.