ಮುಂಡಗೋಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಜ.22 ರಂದು ನಿರ್ಮಾಣವಾಗಲಿದ್ದು, ಪ್ರತಿಯೊಬ್ಬ ಹಿಂದೂಗಳು ಮನೆಯಲ್ಲಿ ಶ್ರೀ ರಾಮನ ಪೂಜೆ ಸಲ್ಲಿಸಿ ದೀಪ ಹಚ್ಚಿ ದೀಪಾವಳಿ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಾರ್ಯಕರ್ತರನ್ನು ಭೇಟಿಯಾಗಿ ಅವರು ಮಾತನಾಡಿ, ರಾಮ ಜನ್ಮಭೂಮಿಯ ಆಂದೋಲನ ನಿರ್ಣಾಯಕ ಹಂತ ತಲುಪಿದೆ.. ಇಡಿ ದೇಶದಲ್ಲೇ ಸಂಭ್ರಮದ ವಾತಾವರಣವಿದ್ದು, ಎಲ್ಲಿ ಹೋದರೂ ನಮ್ಮವರ ನಿಲುವು ಸ್ವಷ್ಟವಾಗಿ ಕಾಣುತ್ತಿದೆ. ಈ ಜಾಗರಣದ ಅಭಿಯಾನಕ್ಕೆ ಹೊಸ ತಿರುವು, ಹೊಸ ವೇಗವನ್ನು ಪ್ರಧಾನಿ ಮೋದಿ ಅವರು ನೀಡಿರುವುದಾಗಿ ಹೇಳಿದರು.
ಸಾವಿರಾರು ವರ್ಷಗಳಿಂದ ಹಿಂದೂಗಳನ್ನು ತುಳಿಯಲು ಪ್ರಯತ್ನವನ್ನು ಮಾಡಲಾಗಿದೆ. ಹಿಂದೂಗಳ ಮೇಲೆ ಮಾಡಿರುವ ದೌರ್ಜನ್ಯಕ್ಕೆ ಲೆಕ್ಕವೇ ಇಲ್ಲ. ಇತಿಹಾಸದಲ್ಲಿ ಯಾವ ಶಬ್ದವು ಅದನ್ನು ವರ್ಣಣೆ ಮಾಡಲು ಸಾಧ್ಯವಿಲ್ಲದಷ್ಟು ಅನ್ಯಾಯವನ್ನು ಹಿಂದೂಗಳು ಅನುಭವಿಸಿದ್ದೇವೆ. ಹಿಂದೂ ಸಮಾಜ ಯಾರ ಋಣವನ್ನು ಇಟ್ಟಿಕೊಳ್ಳದೆ ಇಂದಲ್ಲ ನಾಳೆ ತೀರಿಸುತ್ತದೆ ಎಂದರು. ಈ ವೇಳೆ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕ, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಲ್.ಟಿ.ಪಾಟೀಲ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ತಳವಾರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಹೇಶ ಹೊಸಕೊಪ್ಪ, ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಪ.ಪಂ. ಸದಸ್ಯ ಅಶೋಕ ಚಲವಾದಿ, ಶೇಖರ ಲಮಾಣಿ ಪ್ರಮುಖರಾದ ರಾಜು ಗುಬ್ಬಕ್ಕನವರ ಹಾಗೂ ಕಾರ್ಯಕರ್ತರು ಇದ್ದರು.