Slide
Slide
Slide
previous arrow
next arrow

ಫೆ.24,25ಕ್ಕೆ ‘ಕದಂಬೋತ್ಸವ’

300x250 AD

ಶಿರಸಿ: ತಾಲೂಕಿನ ಬನವಾಸಿಯಲ್ಲಿ ಫೆ.24 ಹಾಗೂ 25ರಂದು ಕದಂಬೋತ್ಸವ ಆಚರಣೆ ಮಾಡಲು ಶಿರಸಿಯ ತಾಲೂಕಾಡಳಿತ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಶಾಸಕರ ಸಮ್ಮುಖದಲ್ಲಿ ಆಯೋಜಿಸಿದ್ದ ಕದಂಬೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಧರಿಸಿ ಘೋಷಣೆ ಮಾಡಲಾಯಿತು.

ದಿನಾಂಕ ಘೋಷಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಬನವಾಸಿ ನಮ್ಮ ನಾಡಿನ ಹೆಮ್ಮೆ. ಸರ್ಕಾರ ಆಚರಿಸುವ ಉತ್ಸವಗಳಲ್ಲಿ ಬನವಾಸಿಯ ಕದಂಬೋತ್ಸವವೂ ಒಂದಾಗಿದೆ. ಯಾವುದೇ ರೀತಿಯ ಗೊಂದಲಗಳಿಲ್ಲದೇ ಪಕ್ಷಾತೀತವಾಗಿ ಕದಂಬೋತ್ಸವ ಆಚರಣೆ ಮಾಡಲಾಗುತ್ತದೆ.ಮುಖ್ಯಮಂತ್ರಿಗಳು , ಉಪಮುಖ್ಯಮಂತ್ರಿಗಳು ಸೇರಿ ಸರ್ಕಾರದ ಹಲವು ಸಚಿವರು ಶಾಸಕರು ಕಾರ್ಯಕ್ರಮಕ್ಕೆ ಆಗಮಿಸುವ ಭರವಸೆ ನಮಗಿದೆ. ಆದಷ್ಟು ಒಳ್ಳೆಯ ರೀತಿಯಲ್ಲಿ ಎಲ್ಲರಿಗೂ ಗೌರವ ಕೊಡುವುದರ ಜೊತೆಗೆ ಕದಂಬೋತ್ಸವ ಆಚರಣೆಯ ಸಂಪ್ರದಾಯಗಳಿಗೆ ಕಿಂಚಿತ್ತೂ ಅಗೌರವ ಆಗದ ರೀತಿಯಲ್ಲಿ ಈ ಬಾರಿಯ ಕದಂಬೋತ್ಸವ ಆಚರಣೆ ಮಾಡೋಣ ಎಂದರು.

ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ ಕದಂಬೋತ್ಸವ ನಮ್ಮ ನಾಡಿನ ಹೆಮ್ಮೆಯ ಉತ್ಸವ. ಕದಂಬೋತ್ಸವ ವೇದಿಕೆಯಲ್ಲೇ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಹ ನಡೆಯುತ್ತದೆ.ಪಂಪ ಪ್ರಶಸ್ತಿ ವಿಜೇತರ ಆಯ್ಕೆಗಾಗಿ ಶ್ರೇಷ್ಠ ಸಾಹಿತಿಗಳ ಕಮೀಟಿ ಇದೆ. ಅವರು ಪಂಪ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ.ಈ ಆಯ್ಕೆ ಪ್ರಕ್ರಿಯೆ ಕೆಲಸ ಆದಷ್ಟು ಬೇಗ ಆಗಬೇಕು.ಕದಂಬೋತ್ಸವವು ಸಂಪೂರ್ಣ ಸರ್ಕಾರದ ಉತ್ಸವವಾಗಿರುತ್ತದೆ. ಬನವಾಸಿ ಸಮೀಪದ ಗುಡ್ನಾಪುರದಲ್ಲಿರುವ ರಾಣಿ ಅರಮನೆಯಿಂದ ಕದಂಬ ಜ್ಯೋತಿ ಹೊರಟು ಶಿವಮೊಗ್ಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚಾರ ನಡೆಸಿ ಬನವಾಸಿ ಕದಂಬೋತ್ಸವ ವೇದಿಕೆಗೆ ಬರುವ ಪದ್ದತಿ ಇದೆ. ಸರ್ಕಾರ ಕದಂಬೋತ್ಸವಕ್ಕೆ ಅನುದಾನ ಬಿಡುಗಡೆ ಮಾಡಿ ಕದಂಬೋತ್ಸವವನ್ನು ಅದ್ದೂರಿಯಾಗಿ ನಡೆಯಲು ಸಹಕಾರ ನೀಡಬೇಕು ಎಂದರು.

300x250 AD

ಬನವಾಸಿ ಭಾಗದ ಮುಖಂಡ ಸಿ.ಎಫ್ ನಾಯ್ಕ ಮಾತನಾಡಿ, ಕದಂಬೋತ್ಸವ ನಡೆಯುವ ಮಯೂರವರ್ಮ ವೇದಿಕೆಗೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡಬೇಕು. ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಶಿವಾಜಿ ಮಾತನಾಡಿ, ಕದಂಬೋತ್ಸವ ವೇದಿಕೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟ ಕಾಣುತ್ತದೆ. ಯಾವುದೇ ರೀತಿಯ ನ್ಯೂನತೆಗಳು ಆಗದಂತೆ ಕದಂಬೋತ್ಸವ ಆಚರಣೆ ಮಾಡಬೇಕು.ಕಳೆದ ಬಾರಿಆದ ತೊಂದರೆಗಳು ಈ ಬಾರಿ ಕದಂಬೋತ್ಸವದಲ್ಲಿ ಆಗದಂತೆ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ ಮಾತನಾಡಿ, ಬನವಾಸಿಯಲ್ಲಿ ಪಂಪ ಹಾಗೂ ಮಯೂರವರ್ಮನ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು. ಬನವಾಸಿಯ ನೆನಪು ಕೇವಲ ಕದಂಬೋತ್ಸವದ ಸಮಯದಲ್ಲಿ ಮಾತ್ರ ಆಗಿದೆ.ಪ್ರತಿದಿನ ಆಗುವಂತೆ ಮಾಡಬೇಕು ಎಂದರು. ಕದಂಬೋತ್ಸವ ಆಡಳಿತ ಪಕ್ಷದ ಉತ್ಸವವಾಗದೇ ಪಕ್ಷಾತೀತವಾಗಿ ಜನೋತ್ಸವ ಆಗಬೇಕು ಎಂದು ಬನವಾಸಿ ಭಾಗದ ಜನರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್,ಶಿರಸಿ ಸಹಾಯಕ ಆಯುಕ್ತೆ ಅಪರ್ಣ ರಮೇಶ, ತಹಸೀಲ್ದಾರ್ ಶ್ರೀಧರ ಮುಂದಲಿಮನಿ ಸೇರಿ ಹಲವರು ಇದ್ದರು.

Share This
300x250 AD
300x250 AD
300x250 AD
Back to top