Slide
Slide
Slide
previous arrow
next arrow

ಪತ್ರಕರ್ತರ ಅವಹೇಳನ; ಕ್ರಮ ಕೈಗೊಳ್ಳಲು ಮನವಿ ಸಲ್ಲಿಕೆ

300x250 AD

ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಹೊನ್ನಾವರ ಪತ್ರಕರ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರರಿಗೆ ಹಾಗೂ ಪೊಲೀಸ್ ಠಾಣೆಗೆ ತೆರಳಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮಣ್ಣಿಗೆಯಲ್ಲಿ ಭಗವಾನ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳ “ವರದಪುರದ ವರದಯೋಗಿ” ನಾಟಕಕ್ಕೆ ಹೊನ್ನಾವರದ ಪತ್ರಕರ್ತರಿಗೆ ಸಂಘಟಕರು ಆಮಂತ್ರಣ ನೀಡಿರಲಿಲ್ಲ. ಅಷ್ಟೆ ಅಲ್ಲದೇ ಕಾರ್ಯಕ್ರಮದ ನಂತರ ವರದಿ ಮಾಡಲು ಫೋಟೋ ಮತ್ತು ಕಾರ್ಯಕ್ರಮದ ವರದಿ ನೀಡಿರಲಿಲ್ಲ.

ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಯಾಜಿ ಮಣ್ಣಿಗೆ ಎನ್ನುವ ಫೇಸ್ಬುಕ್ ಖಾತೆಯಿಂದ ಸಂದೇಶ ಹಾಕಿದ್ದಾರೆ. ಈ ಸಂದೇಶಕ್ಕೆ ನಾಗರಾಜ ಹೆಗಡೆ ಕೊಡಾಣಿ, ಶ್ರೀಲಕ್ಷ್ಮಿ ಯಾಜಿ, ನಿನಾದ ರಾಮಣ್ಣ ಅವರು ಸಹ ಪತ್ರಕರ್ತರಿಗೆ ಅವಮಾನಕರವಾಗುವ ರೀತಿಯಲ್ಲಿ ಬೆಂಬಲ ಸೂಚಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ನಿಷ್ಟೆಯಿಂದ ಸಮಾಜ ಸೇವೆ ಸಲ್ಲಿಸುತ್ತಿರುವ ನಮಗೆ ಇದು ಅವಮಾನಕಾರ ಸಂಗತಿಯಾಗಿದೆ. ಇದನ್ನು ಹೊನ್ನಾವರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ತಾಲೂಕಿನ ಇತಿಹಾಸದಲ್ಲೇ ಈ ರೀತಿಯ ಆಪಾದನೆ ಪ್ರಥಮವಾಗಿ ಕೇಳಿ ಬಂದಿದ್ದು ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಸಚಿವರಾದ ಮಂಕಾಳ ವೈದ್ಯ ಹಾಗೂ ಶಾಸಕ ದಿನಕರ ಶೆಟ್ಟಿ ಸಂಪರ್ಕಿಸಿ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

300x250 AD

ತಹಶೀಲ್ದಾರ ರವಿರಾಜ್ ದಿಕ್ಷೀತ್, ವೃತ್ತ ನಿರೀಕ್ಷಕರಾದ ಸಂತೋಷ ಕಾಯ್ಕಿಣಿ ಮನವಿ ಸ್ವೀಕರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪಿ.ಎಸೈ ಮಹಾಂತೇಶ ನಾಯಕ ತಾಲೂಕಿನ ಪತ್ರಕರ್ತರು ಇದ್ದರು.

Share This
300x250 AD
300x250 AD
300x250 AD
Back to top