Slide
Slide
Slide
previous arrow
next arrow

ಶಿಕ್ಷಣ ಜೊತೆ ಸಂಸ್ಕಾರ ಇದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚಂದ್ರಕಾಂತ ಕೊಚರೇಕರ

300x250 AD

ಹೊನ್ನಾವರ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಹಾಗೇಯೇ ಯುವ ಜನರೂ ಸಹ ವಿದ್ಯಾರ್ಥಿ ಹಂತದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಪಡೆದು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲರೂ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಕೊಚರೇಕರ ಕಿವಿಮಾತು ಹೇಳಿದರು.

ಅವರು ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರಿ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ.ಆದರೆ ಸಂಸ್ಕಾರದ ಕೊರತೆ ಮತ್ತು ಮೊಬೈಲ್ ಗೀಳು ಯುವಜನರ ಬದುಕು ಹಳಿತಪ್ಪಿದ ರೈಲಿನ ಸ್ಥಿತಿಯಂತೆ ಓಲಾಡುತ್ತಿರುವದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದು,ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆಯಾದರೂ ಅದರ ವೇಗ ಹೆಚ್ಚಿಸಲು ಕ್ರಮಗಳು ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಜಿ.ಪಂ.ಅಧ್ಯಕ್ಷ ಆರ್.ಎಸ್.ರಾಯ್ಕರ ಮಾತನಾಡಿ ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮತ್ತು ಈ ಭಾಗದಲ್ಲಿ ಪದವಿ ಶಿಕ್ಷಣದ ಕೊರತೆಯನ್ನು ನೀಗಿಸಬೇಕಿದ್ದು ಅತ್ಯಂತ ಮಧ್ಯವರ್ತಿ ಸ್ಥಳದಲ್ಲಿರುವ ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಪದವಿ ಕಾಲೇಜನ್ನಾಗಿ ಮೇಲ್ದರ್ಜೆಗೆ ಏರಿಸಲು ಈ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸಲಿ ಎಂದು ಅವರು ಮನವಿ ಮಾಡಿದರು. ಗ್ರಾ.ಪಂ.ಸದಸ್ಯ ಪ್ರಮೋದ್ ನಾಯ್ಕ ಮತ್ತು ಶಿಕ್ಷಣ ಪ್ರೇಮಿ ಗಜಾನನ ಹೆಗಡೆ, ಗೋಪ್ರೇಮಿ ಎಸ್. ಪಿ. ಶೆಟ್ಟಿ ಮಾತನಾಡಿದರು. ಪ್ರಾಂಶುಪಾಲ ಡಾ. ಜಿ. ಎಸ್. ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಕಾಲೇಜಿನ ಶೈಕ್ಷಣಿಕ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಊರವರ, ಗ್ರಾಮ ಪಂಚಾಯತ. ಜಿಲ್ಲಾ ಪಂಚಾಯಿತ, ತಾಲ್ಲೂಕು ಪಂಚಾಯಿತ ಮತ್ತು ಸ್ಥಳೀಯ ಶಾಸಕರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸಹಕಾರವನ್ನು ಅವರು ಸ್ಮರಿಸಿದರು.

300x250 AD

ಇದೇ ಸಂದರ್ಭದಲ್ಲಿ ಕಾಲೇಜಿನ ಕದಂಬ ಸಾಂಸ್ಕೃತಿಕ ವಿಭಾಗವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಿತು. ಹಿರಿಯ ಸಾಮಾಜಿಕ ಕಾರ್ಯಕರ್ತ ಆರ್ ಎಸ್ ರಾಯ್ಕರ ಉಪ್ಪೋಣಿ, ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸರಕಾರದ ಅನುದಾನವಿಲ್ಲದೇ ಗೋಶಾಲೆ ನಡೆಸುತ್ತಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಎಸ್. ಪಿ ಶೆಟ್ಟಿ., ಡಾ. ಜಿ. ಎಸ್ ಹೆಗಡೆ ನೀಡಿದ ಹತ್ತುಸಾವಿರ ನಗದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು ಯಕ್ಷಗಾನ ಕ್ಷೇತ್ರದ ದಂತಕತೆ ದಿ. ಮೂಡ್ಕಣಿ ನಾರಾಯಣ ಹೆಗಡೆ ಹೆಸರಿನಲ್ಲಿ ಮೂಡ್ಕಣಿಯ ಗಜಾನನ ಹೆಗಡೆ ಕುಟುಂಬ ಕಾಲೇಜಿನ ಆದರ್ಶವಿದ್ಯಾರ್ಥಿಗಳಿಗೆ ನೀಡಲಾಗುವ ನಗದು ಪುರಸ್ಕಾರ ಮತ್ತು ಪ್ರಶಸ್ತಿಯನ್ನು ಈ ಕಾಲೇಜಿನ ಪ್ರತಿಭಾವಂತ ಹಳೆಯ ವಿದ್ಯಾರ್ಥಿ ಕುಮಾರಿ ತೇಜಸ್ವಿನಿ ಜಟ್ಟಿ ಗೌಡ ಇವರಿಗೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನರಾದ ಕಾಲೇಜಿನ ಉಪನ್ಯಾಸಕ ಮಹೇಶ್ ಹೆಗಡೆ ಇವರುಗಳನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಲೇಜಿನ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆ ಮಾಡಿದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಗಣ್ಯರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಜಿ. ಎಸ್ ಹೆಗಡೆ ಸ್ವಾಗತಿಸಿ ಹಿರಿಯ ಉಪನ್ಯಾಸಕ ಕಿಶೋರ್ ನಾಯ್ಕ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಹರಿಶ್ಚಂದ್ರ ಮೇಸ್ತ ವರದಿ ವಾಚಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಸದಸ್ಯ ವಿನಾಯಕ ನಾಯ್ಕ,ಪ್ರಮೋದ್ ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿಯ ಮಾದೇವ ಗೌಡ, ಜಿ. ಟಿ. ಹಳ್ಳೇರ, ಶಿಕ್ಷಣ ಪ್ರೇಮಿ ಜಾಫರ್ ಸಾಬ್,ಉಪಸ್ಥಿತರಿದ್ದರು ಉಪನ್ಯಾಸಕರುಗಳಾದ ಜೀವನ ಹಬ್ಬು, ರಾಮಕೃಷ್ಣ ಅಗೇರ,ದೇವಿದಾಸ ಕುಮಟಾಕರ, ಸಮೀಯಾಭಾನು, ಶೇಖರ್ ನಾಯ್ಕ,ಜಿ.ಜಿ.ಹೆಗಡೆ, ರೇಷ್ಮಾ ನಾಯ್ಕ, ವೃಂದಾ ಹೆಗಡೆ, ಪದ್ಮಾವತಿ ನಾಯ್ಕ, ಸತೀಶ ನಾಯ್ಕ ತಾ. ಪಂ. ಮಾಜಿ ಸದಸ್ಯ ಲೋಕೇಶ್ ನಾಯ್ಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top