ಕಾರವಾರ: ಇಪಿಎಸ್ 1995 ಪಿಂಚಣಿದಾರರು ಇಪಿಎಸ್ 1995 ನಿಬಂಧನೆಗಳ ಕುರಿತಾಗಿ ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸಲು ಇಪಿಎಫ್ಓ ವತಿಯಿಂದ ಪಿಂಚಣಿ ಅದಾಲತ್ ರಚಿಸಲಾಗಿದೆ.
ಪ್ರಸ್ತುತ ಜನವರಿ 2024 ರ ಪಿಂಚಣಿ ಅದಾಲತ್ ನ್ನು ಜ.16 ರಂದು ಸಂಜೆ 3.30 ಗಂಟೆಗೆ ಹುಬ್ಬಳ್ಳಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕ್ಷೇತ್ರಿಯ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಪಿಂಚಣಿದಾರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪಿಂಚಣಿ ಅದಾಲತ್ನಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬಹುದಾಗಿದೆ. ಇಲ್ಲವೇ ಇ-ಮೇಲ್ ವಿಳಾಸ : ro.hubli@epfindia.gov.in ಮೂಲಕ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಪಿಂಚಣಿ ಅದಾಲತ್ ವಿವರಗಳು ಫೇಸ್ ಬುಕ್ (EPFO HUBLI) ಟ್ವಿಟರ್ (@epfohubli) ಮತ್ತು ವಾಟ್ಸಾಪ್ (tel:+918762525754) ನಲ್ಲಿಯು ಲಭ್ಯವಿರುತ್ತದೆ.