ಶಿರಸಿ: ಲಯನ್ಸ ಕ್ಲಬ್ ಶಿರಸಿಗೆ ಇತ್ತೀಚಿಗೆ ಲಯನ್ಸ ಜಿಲ್ಲೆ 317B ಯ ಜಿಲ್ಲಾ ಪ್ರಾಂತ್ಯಪಾಲರಾದ ಲಯನ್ ಅರ್ಲ್ ಬ್ರಿಟೊ ಅಧಿಕೃತ ಭೇಟಿ ನೀಡಿದರು. ಲಯನ್ಸ ಕ್ಲಬ್ ಶಿರಸಿ ಅಧ್ಯಕ್ಷ ಲಯನ್ ಅಶೋಕ ಹೆಗಡೆ ಸ್ವಾಗತಿಸಿದರು. ಎಲ್ಲ ಲಯನ್ಸ ಕ್ಲಬ್ ಶಿರಸಿ ಸದಸ್ಯರು ಹಾಗೂ ಜಿಲ್ಲಾ ಪ್ರಾಂತ್ಯಪಾಲರು, ಬನವಾಸಿ ರಸ್ತೆ, ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ, ಪ್ರಶಾಂತಿ ಫೌಂಡೇಶನ್ ಶಿರಸಿ ನಡೆಸುತ್ತಿರುವ ವಿಶೇಷ ಚೇತನರು ತಯಾರಿಸುವ ಕರಕುಶಲ ವಸ್ತು ಪ್ರದರ್ಶನವನ್ನು ನೋಡಿ ಅವರನ್ನು ಶ್ಲಾಘಿಸಿ ಹುರಿದುಂಬಿಸಿದರು. ಲಯನ್ಸ ಸದಸ್ಯರು ಸಂಗ್ರಹಿಸಿದ ದಿನಪತ್ರಿಕೆ, ವಾರಪತ್ರಿಕೆಗಳನ್ನು ಅವರ ಕರಕುಶಲ ವಸ್ತು ತಯಾರಿಕೆಗೆ ಹಾಗೂ “ಲಯನ್ಸ ಶಿರಸಿ ಸ್ಪಂದನ” ಕಾರ್ಯಕ್ರಮದಡಿಯಲ್ಲಿ ದೇಣಿಗೆ ನೀಡಲಾಯಿತು.
ಬಳಿಕ ಗಣೇಶ ನೇತ್ರಾಲಯದೊಡಗೂಡಿ ಲಯನ್ಸ ಕ್ಲಬ್ ಶಿರಸಿ ನಡೆಸುತ್ತಿರುವ “ಲಯನ್ಸ ನೇತ್ರ ಭಂಡಾರ” ಕ್ಕೆ ಎಲ್ಲರೂ ಭೇಟಿ ನೀಡಿದರು. ರೊ. ಡಾ. ಕೆ.ವಿ. ಶಿವರಾಮ ಲಯನ್ ಅರ್ಲ್ ಬ್ರಿಟೊರವರಿಗೆ ಈವರೆಗಿನ ನೇತ್ರದಾನ ಹಾಗು ನಡೆಸಲಾದ ನೇತ್ರದಾನದ ಉಚಿತ ಶಸ್ತ್ರ ಚಿಕಿತ್ಸೆಗಳ ವಿವರಣೆ ನೀಡಿದರು. ಲಯನ್ ವಿಶ್ವನಾಥ ಅಂಕದರವರು ಶಸ್ತ್ರ ಚಿಕಿತ್ಸೆಯ ವಿಧಾನ ಹಾಗೂ ನಯನ ನೇತ್ರ ಭಂಡಾರದಲ್ಲಿ ಲಭ್ಯವಿರುವ ವಿಶೇಷ ಉಪಕರಣಗಳ ವಿಸ್ತೃತ ವಿವರಣೆ ನೀಡಿದರು. ಬಳಿಕ ಲಯನ್ ಅರ್ಲ ಬ್ರಿಟೊ ಲಯನ್ಸ ನಗರದ ಆರಂಭದಲ್ಲಿ ಕಟ್ಟಲಾದ “ಲಯನ್ಸ ಕ್ಲಬ್ ಶಿರಸಿ ಮಹಾದ್ವಾರ” ಉದ್ಘಾಟಿಸಿದ ನಂತರ ಲಯನ್ಸ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಲಯನ್ ಅರ್ಲ ಬ್ರಿಟೊ ಲಯನ್ಸ ಕ್ಲಬ್ ಶಿರಸಿಯ ಈವರೆಗಿನ ಸೇವಾ ಕಾರ್ಯಗಳನ್ನು ಅಭಿನಂದಿಸಿ ಲಯನ್ ಅಶೋಕ ಹೆಗಡೆ ಇವರಿಗೆ ಲಯನ್ಸ ಅಂತರರಾಷ್ಟ್ರೀಯ ಅಧ್ಯಕ್ಷರು ನೀಡುವ ಪ್ರಮಾಣಪತ್ರ ನೀಡಿ ಗೌರವಿಸಿದರು. ಕಳೆದ ವರ್ಷದ ಲಯನ್ಸ ಕ್ಲಬ್ ಶಿರಸಿಯ ಸೇವಾ ಕಾರ್ಯಗಳ ಸಾಧನೆಗೆ ಲಯನ್ಸ ಅಂತರರಾಷ್ಟ್ರೀಯ ಸಂಸ್ಥೆ ನೀಡಿದ “ಕ್ಲಬ್ ಎಕ್ಸಲೆನ್ಸ” ಅವಾರ್ಡ ಈ ಮೊದಲಿನ ಅಧ್ಯಕ್ಷರಾದ ಲಯನ್ ತ್ರಿವಿಕ್ರಮ ಪಡೆದುಕೊಂಡರು. ಲಯನ್ ಉದಯ ಸ್ವಾದಿ, ಲಯನ್ ಡಾ. ಮಹೇಶ ಭಟ್, ಲಯನ್ ಸಂತೋಷ ಶೇಟ್ ಲಯನ್ಸ ಅಂತರರಾಷ್ಟ್ರೀಯ ಸಂಸ್ಥೆಗೆ ದೇಣಿಗೆ ನೀಡಿದರು. ನೂತನ ಸದಸ್ಯ ಲಯನ್ ಜಸರಾಜ ಚೌಧರಿ, ಜೆ.ಕೆ. ಸ್ಟೀಲ್ ಮತ್ತು ಗ್ರೈನೇಟ್ ನ ಮಾಲೀಕರು, ಲಯನ್ಸ ಕ್ಲಬ್ ಶಿರಸಿ ಸೇವಾ ಕಾರ್ಯಗಳಿಗೆ ರೂ. 51000/- ದೇಣಿಗೆ ನೀಡಿದರು. ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ ಹೆಗಡೆ, ಖಜಾಂಚಿ ಲಯನ್ ಶರಾವತಿ ಭಟ್, ಇವರಿಗೆ ವಿಶೇಷ ಲೇಪಲ್ ಪಿನ್ ನೀಡಿ ಗೌರವಿಸಲಾಯಿತು. ಇವರ ಎಲ್ಲ ಲಯನ್ ಸದಸ್ಯರಿಗೆ ಲಯನ್ಸ ಜಿಲ್ಲಾ ಲೇಪಲ್ ಪಿನ್ ನೀಡಿ ಗೌರವಿಸಲಾಯಿತು. ಬಳಿಕ ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ ಹೆಗಡೆ ವಂದಿಸಿದರು. ಲಯನ್ ರಮಾ ಪಟವರ್ಧನ್ ಹಾಗೂ ಲಯನ್ ಅಶ್ವಥ ಮುಳಖಂಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.