Slide
Slide
Slide
previous arrow
next arrow

ತಾಲ್ಲೂಕಾಡಳಿತದ ಕಾರ್ಯಾಚರಣೆ: ಕಣಜದ ಗೂಡು ನಾಶ

300x250 AD

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತಸೌಧದ ಸಮೀಪ ಮರವೊಂದರಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಬೃಹತ್ ಕಣಜದ ಹುಳಗಳ ಗೂಡನ್ನು ತಾಲ್ಲೂಕಾಡಳಿತದ ಸೂಚನೆಯಂತೆ ನಗರದ ಉರಗ ಪ್ರೇಮಿ ರಜಾಕ್ ಶಾ ಮಂಗಳವಾರ‌ ನಸುಕಿನ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿ, ಅದನ್ನು ತೆಗೆದು ದೂರದ ಕಾಡಿಗೆ‌ ಬಿಟ್ಟು ಬಂದಿದ್ದಾರೆ.

ಇಲ್ಲಿ ಮರವೊಂದರಲ್ಲಿ ದೊಡ್ಡ ಗಾತ್ರದ ಕಣಜದ ಹುಳಗಳು ಗೂಡು ಕಟ್ಟಿದ್ದವು. ಈ ಹುಳಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುವ ಅಪಾಯವಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಹಾಗೂ ವಾಹನಗಳ ಓಡಾಟ ಒಂದೆಡೆಯಾದರೇ, ಹತ್ತಿರದಲ್ಲೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಆದರ್ಶ ಶಾಲೆಯು ಇರುವುದರಿಂದ ಮತ್ತು ತಾಲ್ಲೂಕು ಆಡಳಿತ ಸೌಧಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಯಾವುದೇ ಅನಾಹುತವಾಗಬಾರದೆಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಕಣಜದ ಹುಳಗಳ ಗೂಡನ್ನು ತೆರವುಗೊಳಿಸಲು‌ ಮುಂದಾಗಿದ್ದರು.

ತಹಶೀಲ್ದಾರ್ ಶೈಲೇಶ್ ಪರಮಾನಂದ ಸೂಚನೆಯಂತೆ ಸುಭಾಷ್ ನಗರದ ತೌಸೀಪ್ ಸನದಿಯವರ ಕ್ರೈನ್ ಬಳಸಿಕೊಂಡು, ಸುರಕ್ಷಿತಾ ಜಾಕೆಟ್ ಧರಿಸಿ ಕ್ರೈನ್‌ ಮೂಲಕ ಉರಗ ಪ್ರೇಮಿ ರಜಾಕ್ ಶಾ ಕಣಜದ ಹುಳಗಳ ಗೂಡಿನ ಹತ್ತಿರ ಹೋಗಿ, ಸುರಕ್ಷಾ ಪರಿಕರವನ್ನು ಬಳಸಿ ಕಣಜದ ಹುಳಗಳ ಗೂಡನ್ನು ಮರದಿಂದ ಬೇರ್ಪಡಿಸಿ, ಅನಂತರ ದೂರದ ಕಾಡಿಗೆ ಬಿಟ್ಟು ಬಂದಿದ್ದಾರೆ. ಈ ಕಾರ್ಯಾಚರಣೆಗೆ ಕಪೂರ್ ಸಹಕರಿಸಿದರು.

300x250 AD

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಹಾಗೂ ಆಡಳಿತ ಸೌಧದ ಸಿಬ್ಬಂದಿಗಳು ಉಪಸ್ಥಿತರಿದ್ದು, ರಜಾಕ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

Share This
300x250 AD
300x250 AD
300x250 AD
Back to top