Slide
Slide
Slide
previous arrow
next arrow

ಭೂ ನ್ಯಾಯ ಮಂಡಳಿಗೆ ಸದಸ್ಯರಾಗಿ ಭರತ್ ಹೆಗಡೆ ಕೆಂಚಗದ್ದೆ ನೇಮಕ

300x250 AD

ಶಿರಸಿ : ಕುಳವೆ ಗ್ರಾಮ ಪಂಚಾಯಯತದ ಮಾಜಿ ಉಪಾಧ್ಯಕ್ಷ, ನ್ಯಾಯವಾದಿ ಭರತ್ ಹೆಗಡೆ ಕೆಂಚಗದ್ದೆ ಶಿರಸಿ ತಾಲೂಕಿನ ಭೂ ನ್ಯಾಯ ಮಂಡಳಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಈ ಕುರಿತು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಗೌರಮ್ಮ ಆರ್. ಆದೇಶ ಹೊರಡಿಸಿದ್ದಾರೆ.‌ ಇವರ ಜೊತೆಯಲ್ಲಿ ಸದಸ್ಯರಾಗಿ ಅಮರ್ ನೇಕರಲಕಟ್ಟಿ, ರವಿ ನಾಯ್ಕ ಗುಡ್ನಾಪುರ, ಜ್ಯೋತಿ ಗೌಡ ಅವರನ್ನು ನೇಮಕ ಮಾಡಲಾಗಿದೆ. ಮಂಡಳಿಯ ಅಧ್ಯಕ್ಷರಾಗಿ ಶಿರಸಿ ಸಹಾಯಕ ಆಯುಕ್ತರು ಇರಲಿದ್ದು,ಸದಸ್ಯ ಕಾರ್ಯದರ್ಶಿಯಾಗಿ ತಹಶೀಲ್ದಾರ ಅವರು ಇರಲಿದ್ದಾರೆ. ಎಲ್ಲರೂ ಮುಂದಿನ ಆದೇಶದವರೆಗೆ ನಾಮನಿರ್ದೇಶಿತ ಸದಸ್ಯರಾಗಿ ಇರುವರು ಎಂದು ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top