ಶಿರಸಿ: ಪರಿಶುದ್ಧವಾದ ಧ್ಯೇಯವನ್ನಿರಿಸಿಕೊಂಡೇ, ಸತತವಾದ ಪರಿಶ್ರಮದಿಂದ ಮಕ್ಕಳು ಶಿಕ್ಷಣವನ್ನು ಪಡೆದುಕೊಂಡಾಗ ಮುಂದಿನ ಜೀವನದಲ್ಲಿ ಯಶಸ್ಸನ್ನು ಗಳಿಸಲುಸಾಧ್ಯ ಎಂದು ಬೆಂಗಳೂರಿನ ವಿಸ್ತಾರ ಕಂಡನಿಯ ಸಂಸ್ಥಾಪಕರಾದ ಬ್ರಹ್ಮಾನಂದ ಎಂ.ಹೆಗಡೆ ಕಾನಮುಸ್ಕಿ ತಿಳಿಸಿದರು.
ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳಿಂದ ನಿರ್ಮಿತವಾದ ಕೈ-ಬರಹ ಹಸ್ತ ಪ್ರತಿ ‘ಅಭಿಧಾನ’ವನ್ನು ಬಿಡುಗಡೆಗೊಳಿಸಿ, ಮಾತನಾಡಿದ ಅವರು ತಾಳ್ಮೆ, ಸಹನೆ ಹಾಗೂ ಆಸಕ್ತಿಯಿಂದ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಗುರಿ ಸಾಧಿಸುವುದರೊಂದಿಗೆ ಪ್ರತಿಯೊಬ್ಬರೂ ಸತ್ಯತೆ, ಸಹನಾಶೀಲತೆ ಹಾಗೂ ನಿಯಮ ಪಾಲನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ವಾನಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾದ ಜಯರಾಮ ಹೆಗಡೆ ಕರಡಗಿತ್ತಿ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಗ್ರಾ.ಪಂ ಅಧ್ಯಕ್ಷರಾದ ವೀಣಾ ಗೌಡ ಗೋಣ್ಸರ, ಎಂ.ಜಿ.ಸಿ.ಟ್ರಸ್ಟ್ ಉಪಾಧ್ಯಕ್ಷರಾದ ಮಹಾದೇವ ಹೆಗಡೆ ಕಾನಮುಸ್ಕಿ ಹಾಗೂ ಶ್ರೀ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಂ.ಎನ್.ಭಟ್ಟ ಅರೆಕಟ್ಟಾ ಅತಿಥಿಗಳಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂ.ಜಿ.ಸಿ.ಟ್ರಸ್ಟ್ ಮೆಣಸಿಯ ಅಧ್ಯಕ್ಷರಾದ ಎನ್.ಎಸ್.ಹೆಗಡೆ ಕೋಟಿಕೊಪ್ಪ ಮಾತನಾಡಿ ಪ್ರೌಢಶಾಲೆಯ ಆರಂಭದಿAದ ಈ ವರೆಗಿನ ಪ್ರಗತಿಯನ್ನು ವಿಶ್ಲೇಷಿಸಿ ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣದ ಪ್ರಗತಿ ಹಾಗೂ ಪ್ರತಿಭೆ ಅನಾವರಣಗೊಳ್ಳುವ ಪಾಲಕರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನಡೆದ ಮನರಂಜನಾ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿತು.