Slide
Slide
Slide
previous arrow
next arrow

ಕಲಾವಿದರ ಬಗೆಗಿನ ಕನ್ನಡ-ಸಂಸ್ಕೃತಿ ಇಲಾಖೆಯ ಕಾಳಜಿ, ಸಹಕಾರ ಅಭಿನಂದನೀಯ: ವಸುಧಾ ಶರ್ಮಾ

300x250 AD

ಸಾಗರ: ಇಲ್ಲಿನ ವೇದನಾದ ಪ್ರತಿಷ್ಠಾನವು ಶ್ರೀ ಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ,ಸಾಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ , ಪ್ರತಿ ತಿಂಗಳು 1 ದಿನದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರದರ್ಶನ ನೀಡಲು ಅವಕಾಶವನ್ನು ಒದಗಿಸುವುದರ ಜೊತೆ, ವಿವಿಧ ಕಲಾವಿದರನ್ನು ಆಹ್ವಾನಿಸಿ, ಈ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಕೊಡುಗೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಅಂತೆಯೇ, ಡಿ. 23, ಶನಿವಾರದಂದು ಏರ್ಪಡಿಸಲಾಗಿದ್ದ “ಸ್ವರಾರ್ಚನೆ” ಸಂಗೀತ ಕಾರ್ಯಕ್ರಮವು ಸಂಗೀತಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಆಹ್ವಾನಿತ ಕಲಾವಿದರಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ವಿದುಷಿ ಶ್ರೀಮತಿ ಸೀತಾ ಬಾಪಟ್ ಇವರನ್ನು ಸನ್ಮಾನಿಸಲಾಯಿತು. ವೇದನಾದ ಪ್ರತಿಷ್ಠಾನದ ಅಧ್ಯಕ್ಷರಾದ ಹೆಚ್.ಕೆ. ವೆಂಕಟೇಶ್ ಹುಲಿಮನೆ, ಕಾರ್ಯದರ್ಶಿಗಳಾದ ವಿದ್ವಾನ್ ಹೆಚ್. ಎನ್. ನರಸಿಂಹಮೂರ್ತಿ ಶರ್ಮ, ಹಿರಿಯ ತಬಲಾ ವಾದಕರಾದ ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ, ನಗರದ ಎಲ್.ಐ.ಸಿ. ಶಾಖಾ ಪ್ರಬಂಧಕರಾದ ಶ್ರೀಧರ ಸಿ. ಹೆಗಡೆ ಮತ್ತು ವಿದ್ಯಾಲಯ ಸಂಗೀತ ಶಿಕ್ಷಕಿಯಾದ ವಿದುಷಿ ಶ್ರೀಮತಿ ವಸಧಾ ಶರ್ಮ ಇವರು ಉಪಸ್ಥಿತರಿದ್ದರು.

ವೇದನಾದ ಪ್ರತಿಷ್ಠಾನದ ಕಾರ್ಯದರ್ಶಿ ಹೆಚ್.ಎನ್. ನರಸಿಂಹಮೂರ್ತಿ ಶರ್ಮ ಮತ್ತು ವಿದುಷಿ ವಸುಧಾ ಶರ್ಮ, ಸಂಸ್ಥೆ ನಡೆದುಕೊಂಡು ಬಂದ ಬಗೆ ಮತ್ತು ಕಲಾವಿದರಿಗೆ ಮತ್ತು ಸಂಘಟನೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಿದುಷಿ ಶ್ರೀಮತಿ ಚೇತನಾ ಹಿಂಡೂಮನೆ, ಶ್ರೀಮತಿ ಶೈಲಶ್ರೀ ಹಿರೇಮನೆ, ಶ್ರೀಮತಿ ಆಶಾ ಪುರುಷೋತ್ತಮ್ ನಿಟ್ಟೂರು, ಕುಮಾರಿ ಆಶ್ರಿತಾ ಜೋಗಿ, ಕುಮಾರಿ ಖುಷಿ ಹರ್ದೂರ್ ಇವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನವನ್ನು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ವಿದ್ವಾನ್ ನಿಖಿಲ್ ವಿ ಕುಂಸಿ ಹಾಗೂ ಸಂವಾದಿಯಲ್ಲಿ ಶ್ರೀಧರ್ ಶಾನ್ಭಾಗ್ ಮತ್ತು ಕುಮಾರಿ ಶ್ರೀರಂಜಿನಿ ಹೆಚ್. ಸಿ. ಸಹಕರಿಸಿದರು.

300x250 AD

ಸಭಾ ಕಾರ್ಯಕ್ರಮದ ನಂತರ ಗಾಯಕರಾದ ವಿದುಷಿ ಶ್ರೀಮತಿ ಸೀತಾ ಬಾಪಟ್ ನೀಚಡಿ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು. ಇವರಿಗೆ ಮೃದಂಗದಲ್ಲಿ ವಿದ್ವಾನ್ ನರಸಿಂಹಮೂರ್ತಿ ಶರ್ಮ ಹಾಗೂ ಸಂವಾದಿನಿಯಲ್ಲಿ ಸಂವತ್ಸರ ಸಾಗರ ಸಹಕರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ, ಸಂಗೀತ ಅಭ್ಯಾಸದ ಬಗ್ಗೆ ಹಾಗೂ ಆರೋಗ್ಯದ ಮೇಲಿನ ಸಂಗೀತದ ಪರಿಣಾಮ ಹಾಗೂ ಅದರ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

Share This
300x250 AD
300x250 AD
300x250 AD
Back to top