ದಾಂಡೇಲಿ: ನಗರದ ಅಂಬೇವಾಡಿಯ ಕೈಗಾರಿಕಾ ಪ್ರದೇಶದಲ್ಲಿ ಹೊರ ಚೆಲ್ಲಲಾದ ತ್ಯಾಜ್ಯ ವಸ್ತುಗಳ ರಾಶಿಗೆ ಯಾರೋ ಬೆಂಕಿಕೊಟ್ಟ ಹಿನ್ನೆಲೆಯಲ್ಲಿ ಇದೀಗ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹಾಗೂ ಸುತ್ತಮುತ್ತಲ ವಾತಾವರಣ ಕಲುಷಿತಗೊಳ್ಳುತ್ತಿರುವ ಘಟನೆ ಗುರುವಾರ ನಡೆದಿದೆ.
ಅಂಬೇವಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಜಿ.ಟಿ.& ಟಿ.ಸಿ ಕಾಲೇಜಿನ ಹತ್ತಿರವಿರುವ ವಾಟರ್ ಟ್ಯಾಂಕ್ ಬಳಿ ಬಳಕೆ ಮಾಡಿ ನಿರುಪಯುಕ್ತವಾಗಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ರಾಶಿ ಹಾಕಲಾಗಿತ್ತು. ಹೀಗೆ ರಾಶಿ ಹಾಕಿರುವ ತ್ಯಾಜ್ಯ ವಸ್ತುಗಳಿಗೆ ಯಾರೋ ಬೆಂಕಿಯನ್ನು ಕೊಟ್ಟಿದ್ದರ ಪರಿಣಾಮವಾಗಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳು ಸುಡುತ್ತಿದ್ದು, ಅದರಿಂದ ಹೊರ ಬರುವ ಹೊಗೆ ವಾಸನೆಯಿಂದ ಕೂಡಿದ್ದು, ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳಿಗೂ ತೀವ್ರ ತೊಂದರೆಯಾಗತೊಡಗಿದೆ.
ಈ ನಿಟ್ಟಿನಲ್ಲಿ ಸಂಬಂಧಪಟ್ಟವರು, ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮನವಿಯನ್ನು ಮಾಡಿದ್ದಾರೆ.