Slide
Slide
Slide
previous arrow
next arrow

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ದಾಂಡೇಲಿಯ ಮೋಹನ್ ಚವ್ಹಾಣ್ ತಂಡ

300x250 AD

ದಾಂಡೇಲಿ : ನಗರದ ಸಾಹಸಿ ಯುವಕರೊಬ್ಬರು ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರುವ ಮೂಲಕ ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಈ ಸಾಧನೆಯನ್ನು ಮೆರೆದ ಯುವಕ ಗಾಂಧಿನಗರದ ಮೋಹನ್ ಪರಶುರಾಮ ಚೌವ್ಹಾಣ್ ಎಂಬವರಾಗಿದ್ದಾರೆ. ಹೋಟೆಲ್ ಮ್ಯಾನೇಜ್ಮೆಂಟ್ ಶಿಕ್ಷಣವನ್ನು ಪಡೆದಿರುವ ಮೋಹನ್ ವಿದ್ಯಾರ್ಥಿ ಜೀವನದಲ್ಲಿ ಟ್ರೆಕ್ಕಿಂಗ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡವರು.

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಬೇಕೆಂದು ಪಣತೊಟ್ಟು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ 8 ಜನ ಯುವಕರ ತಂಡದ ಸಾರಥ್ಯವನ್ನು ವಹಿಸಿ ಡಿ:9 ರಂದು ಶಿಖರವೇರುವ ಚಾರಣವನ್ನು ಪ್ರಾರಂಭಿಸಿ ಡಿ: 20 ರಂದು 5,364 ಮೀಟರ್ ಎತ್ತರದ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್‌ ಅನ್ನು ಏರಿ ಸಾಧನೆಯನ್ನು ಮೆರೆದಿದ್ದಾರೆ.

300x250 AD

ಒಟ್ಟು 12 ದಿನಗಳ ಈ ಸಾಹಸ ನಡಿಗೆ ರಣರೋಚಕವಾಗಿದ್ದು, ಮೈನಸ್ 18 ರಿಂದ ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಎದುರಿಸಿ ಎವರೆಸ್ಟ್ ಬೇಸ್ ಕ್ಯಾಂಪನ್ನು ಏರಿದ್ದೇವೆ ಎಂದು ನಗರದಲ್ಲಿ ಮೋಹನ್ ಪರಶುರಾಮ್ ಚೌವ್ಹಾಣ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮೋಹನ್ ಪರಶುರಾಮ್ ಚೌವ್ಹಾಣ್ ಅವರು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪನ್ನು ಏರುವ‌ ಮೂಲಕ ದಾಂಡೇಲಿಗೆ ಕೀರ್ತಿಯನ್ನು ತಂದಿದ್ದಾರೆ.

Share This
300x250 AD
300x250 AD
300x250 AD
Back to top