ಜೊಯಿಡಾ; ತಾಲೂಕಿನ ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರು ನೇಮಿಸದಿದ್ದಲ್ಲಿ ಜನವರಿ 05 ರಂದು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮಾಡಲಾಗುವುದೆಂದು ಶಾಲಾಭಿವೃದ್ದಿ ಸಮಿತಿ ಹಾಗೂ ಪಾಲಕರು ಜೊಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಿದ್ದಾರೆ.
ನ:15 ರಂದು ಮನವಿ ನೀಡಿ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಲಾಗಿತ್ತು. ಶಿಕ್ಷಣ ಇಲಾಖೆಯಿಂದ ಶಿಕ್ಷಕರೊಬ್ಬರನ್ನು ನೇಮಿಸಲಾಗಿದ್ದರೂ ಅವರು ತಿಂಗಳಿಗೆ ಒಂದೆರಡು ದಿನ ಮಾತ್ರ ಶಾಲೆಗೆ ಬರುತ್ತಾರೆ. ಕೇವಲ ಶಾಲಾ ದಾಖಲೆ ತಯಾರಿಸಲು ಸೀಮಿತವಾದ ವಿಶೇಷ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದಿಲ್ಲ. ಆದ್ದರಿಂದ ಖಾಯಂ ಶಿಕ್ಷಕರ ನೇಮಕ ಅಗತ್ಯವುದೆ. ಮನವಿಗೆ ಶೀಘ್ರ ಸ್ಪಂದಿಸದಿದ್ದಲ್ಲಿ ಜನವರಿ 5 ರಂದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮಾಡಲು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪಾಲಕರು ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷರಾದ ಗಜಾನನ ದೇವಿದಾಸ ಮೊದಲಾದವರು ಸಹಿಯನ್ನು ಮಾಡಿದ್ದಾರೆ.