Slide
Slide
Slide
previous arrow
next arrow

ಸ್ಕಿಲ್ಸ್ ಇಂಡಿಯಾ ಕರ್ನಾಟಕ-2024 ಸ್ಪರ್ಧೆ ನೋಂದಣಿಗೆ ಅವಕಾಶ

300x250 AD

ಕಾರವಾರ: ವಿಶ್ವಕೌಶಲ್ಯ ಸ್ಪರ್ಧೆ-2024 ಫ್ರಾನ್ಸ್ ದೇಶದ ಲೀಯಾನ್‍ನಲ್ಲಿ ನಡೆಯಲಿದ್ದು, ಇದರ ಪೂರ್ವತಯಾರಿಗಾಗಿ ಕರ್ನಾಟಕ ಕೌಶಲ್ಯಾಬಿವೃದ್ಧಿ ನಿಗಮವು (ಕೆ.ಎಸ್.ಡಿ.ಸಿ) “ಸ್ಕಿಲ್ಸ್ ಇಂಡಿಯಾ ಕರ್ನಾಟಕ 2024”ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಜ.7 ಕೊನೆಯ ದಿನವಾಗಿದೆ.

ಪ್ರಾಥಮಿಕ ಹಂತ, ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದವರಿಗೆ ನಿರಂತರ ತರಬೇತಿಯನ್ನು ಒದಗಿಸಿ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸಲು ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲು ವೇದಿಕೆಯನ್ನು ಕಲ್ಪಿಸಿಕೊಡುವುದು, ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಈ ಸ್ಪಧೆಯಲ್ಲಿ 57 ಕೌಶಲ್ಯಗಳ ಪಟ್ಟಿಯಿದ್ದು ಯಾವೂದಾದರು ಒಂದು ಕೌಶಲ್ಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಆಸಕ್ತಿ ಉಳ್ಳವರು http://www.skillindiadigital.gov.in ವೆಬ್‍ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು 1 ಜನವರಿ 1999 ಅಥವಾ 1 ಜನವರಿ 2002 ರ ನಂತರ ಜನಿಸಿದವರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಯ ಮೊಬೈಲ್ ಸಂಖ್ಯೆ :Tel:+917975633671ಅಥವಾ Tel:+918861911982 ಇವರನ್ನು ಸಂಪರ್ಕಿಸಬಹುದುಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top