Slide
Slide
Slide
previous arrow
next arrow

ಜ.6,7ಕ್ಕೆ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ

300x250 AD

ಕಾರವಾರ: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಜ.6 ಮತ್ತು 7ರಂದು ಬಳ್ಳಾರಿ ಜಿಲ್ಲೆಯಲ್ಲಿ ಸಂಘಟನೆ ಮಾಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಗುಂಪು ಮತ್ತು ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ.

ಭಾಗವಹಿಸುವ ಸ್ಪರ್ಧಿಗಳು ಜ.6ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನಂತರ ಆಗಮಿಸುವವರನ್ನು ನೊಂದಾಯಿಸಿಕೊಳ್ಳಲಾಗುವುದಿಲ್ಲ. ನೊಂದಣಿಗೆ ವಯೋ ದೃಢೀಕರಣ ಪತ್ರ (ಮೂಲ ಆಧಾರ ಕಾರ್ಡ/ಎಸ್.ಎಸ್.ಎಲ್.ಸಿ ಅಂಕಪಟ್ಟಿ) ಕಡ್ಡಾಯವಾಗಿರುತ್ತದೆ. ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ 15 ರಿಂದ 29 ವರ್ಷದೊಳಗಿನ ಯುವ ಕಲಾವಿದರಿಗೆ ಮಾತ್ರ ಅವಕಾಶ. ಸ್ಪರ್ಧಿಗಳಿಗೆ 2 ದಿನಗಳ ಸಾಮಾನ್ಯ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸ್ಪರ್ಧಿಗಳು ಕಡ್ಡಾಯವಾಗಿ ಲಘು ಹಾಸಿಗೆ, ಹೊದಿಕೆ ಮತ್ತು ಬೀಗಗಳನ್ನು ತರಬೇಕು. ಜಿಲ್ಲೆಯಿಂದ ಭಾಗವಹಿಸುವ ಕಲಾವಿದರಿಗೆ 2 ದಿನಗಳ ಊಟೋಪಹಾರದ ವ್ಯವಸ್ಥೆಯನ್ನು ಸಂಘಟಕರು ಕಲ್ಪಿಸಿದ್ದು, ನೊಂದಣಿಯಲ್ಲಿ ಕೂಪನ್ ಪಡೆದು ಸಂಘಟಕರಿಗೆ ಸಹಕರಿಸುವುದು. ರಾಜ್ಯ ಮಟ್ಟದ ಯುವಜನೋತ್ಸವದ ಸ್ಪರ್ಧೆಗಳಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಜನಪದ ನೃತ್ಯ ವೈಯಕ್ತಿಕ ವಿಭಾಗದಲ್ಲಿ ಯಾವುದೇ ಸಿ.ಡಿ. ಪೆನ್‍ಡ್ರೈವ್ ಬಳಸುವಂತಿಲ್ಲ. ಹಿನ್ನೆಲೆಯಾಗಿ ವಾಧ್ಯ ಪರಿಕರ, ಗಾಯಕರನ್ನು ಬಳಸಬಹುದು. ಗರಿಷ್ಟ ಹಿನ್ನೆಲೆಯಲ್ಲಿ 4 ಜನರಿಗೆ ಮೀರದಂತೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಜನಪದ ಗೀತೆ ವೈಯಕ್ತಿಕ ವಿಭಾಗದಲ್ಲಿ ಯಾವುದೇ ಸಿ.ಡಿ. ಪೆನ್‍ಡ್ರೈವ್ ಬಳಸುವಂತಿಲ್ಲ. ಹಿನ್ನೆಲೆಯಾಗಿ ವಾಧ್ಯ ಪರಿಕರ, ಜನಪದ ಉಪಕರಣಗಳನ್ನು ಬಳಸಬಹುದು. ಗರಿಷ್ಟ ಹಿನ್ನೆಲೆಯಲ್ಲಿ 4 ಜನರಿಗೆ ಮೀರದಂತೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ಕಾರವಾರಕಚೇರಿಯದೂರವಾಣಿಸಂಖ್ಯೆ: Tel:+9108382201824, Tel:+919480886551 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top