Slide
Slide
Slide
previous arrow
next arrow

ಪಿಡ್ಬ್ಲೂಡಿ ಇಲಾಖೆಯ ನಿರ್ಲಕ್ಷ್ಯ; ಕೊಡ್ಲಗದ್ದೆ ಗ್ರಾಮಸ್ಥರ ಆಕ್ರೋಶ

300x250 AD

ಅಂಕೋಲಾ: ತಾಲೂಕಿನ ಗಡಿಭಾಗವಾದ ಕೊಡ್ಲಗದ್ದೆಗೆ ತೆರಳುವ ಡಾಂಬರ್ ರಸ್ತೆಯ ಪ್ಯಾಚ್ ವರ್ಕ್ ಕಾಮಗಾರಿಯು ತೀರ ಕಳಪೆ ಮಟ್ಟದಿಂದ ಕೂಡಿದ್ದು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿ ಕಾಮಗಾರಿ ಮಾಡಿದ್ದಾರೆ ಎಂದು‌‌ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಕೊಡ್ಲಗದ್ದೆಯಲ್ಲಿ ನಡೆದಿದೆ.

ರಸ್ತೆಗೆ ಸರಿಯಾಗಿ ಪ್ಯಾಚ್ ವರ್ಕ್ ಮಾಡದೇ ಕೇವಲ ನಾಮಕಾವಸ್ಥೆಗೆ ಮಾತ್ರ ಡಾಂಬರೀನ ಲೇಪನ‌ ಮಾಡಿ ಹೋಗಿದ್ದಾರೆ. ನಾವು ಹಳ್ಳಿಯ ಜನ, ಇಲ್ಲಿ ಯಾರೂ ಪ್ರಶ್ನೆ ಮಾಡುವವರಿಲ್ಲ ಎಂದು ಬೇಕಾಬಿಟ್ಟಿ ದುರಸ್ಥಿ ಕಾಮಗಾರಿ ಮಾಡಿ ತೆರಳಿದ್ದಾರೆ. ರಸ್ತೆಯ ಮೇಲಿದ್ದ ಧೂಳನ್ನು ತೆಗೆಯದೇ ಅಲ್ಲಲ್ಲಿ ಡಾಂಬರ್ ಹಾಕಿಟ್ಟು ಹೋಗಿದ್ದಾರೆ. ಈ ರಸ್ತೆ ಮಳೆಗಾಲ ಬರುವುದರೊಳಗೆ ಸಂಪೂರ್ಣ ಕಿತ್ತು ಹೋಗುವುದಲ್ಲದೇ ಮತ್ತಿಷ್ಟು ಹೊಂಡಗಳು ಇವರ ಕಳಪೆ ಕಾಮಗಾರಿಯಿಂದ ಸೃಷ್ಟಿಯಾಗಲಿದೆ. ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿರುವ ಈ ರಸ್ತೆಯು ಸುಮಾರು ‌9 ಕಿ.ಮೀ.ನಷ್ಟು ಉದ್ದವನ್ನು ಹೊಂದಿದೆ. ಇಲಾಖೆಯ ಅಧಿಕಾರಿಗಳು ಒಮ್ಮೆಯೂ ಇತ್ತ ಮುಖ ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರಾದ ಪ್ರಭಾಕರ ನಾಯ್ಕ, ಮಂಜುನಾಥ ಪಟಗಾರ, ಕೇಶವ ಪಟಗಾರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

300x250 AD

ಅಷ್ಟೇ ಅಲ್ಲದೇ ಕೊಡ್ಲಗದ್ದೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಇನ್ನು ಹಲವಾರು ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು, ಕಳೆದ 3 ವರ್ಷಗಳ ಹಿಂದೆ ಮೈಲುಗಲ್ಲುಗಳನ್ನು ರಸ್ತೆಯ ಪ್ರತಿ ಕಿ.ಮೀ‌ಗೆ ಒಂದರಂತೆ ಸುಮಾರು 5 ಕಂಬಗಳನ್ನು ಅಲ್ಲಲ್ಲೇ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಆದರೆ ಇದುವರೆಗೂ ಮೈಲುಗಂಬವನ್ನು ನಿಲ್ಲಿಸುವ ಕೆಲಸವನ್ನು ಇಲಾಖೆ ಮಾಡಿಲ್ಲ. ಕೆಲವು ಕಂಬಗಳು ಮಣ್ಣಲ್ಲೇ ಹುಗಿದುಹೋಗಿದೆ. ಇನ್ನು ಒಂದು ವಾರದಲ್ಲಿ ಈ ಬಗ್ಗೆ ತನಿಖೆಯಾಗಿ ಸತ್ಯಾಂಶವನ್ನು ಮಾಧ್ಯಮದ ಮೂಲಕ ತಿಳಿಸದೇ ಇದ್ದಲ್ಲಿ ಅಂಕೋಲಾ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಕುಳಿತು ಧರಣಿಯನ್ನು ನಡೆಸುತ್ತೇವೆ ಎಂದು ಗ್ರಾಮಸ್ಥರಾದ ಮಂಜು ಪಟಗಾರ, ಪ್ರಭಾಕರ ನಾಯ್ಕ, ಕೇಶವ ಪಟಗಾರ, ವಿಷ್ಣು ಪಟಗಾರ, ನಾರಾಯಣ ಪಟಗಾರ, ಭೂಪತಿ ಪಟಗಾರ, ನಾಗೇಶ ಪಟಗಾರ, ತಿಮ್ಮಪ್ಪ ಪಟಗಾರ, ಮಹೇಶ ನಾಯ್ಕ, ಚಂದ್ರಶೇಖರ ಗಾಂವಕರ್, ಮುಂತಾದವರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top