Slide
Slide
Slide
previous arrow
next arrow

ಔಪಚಾರಿಕ, ಗಣಕೀಕೃತ ಶಿಕ್ಷಣ :ಮದರಸಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

300x250 AD

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ನೊಂದಾಯಿತ ಮದರಸಾಗಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣವನ್ನು ನೀಡಲು ಮದರಸಾ ಸಂಸ್ಥೆಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮದರಸಾ ಸಂಸ್ಥೆಗಳು ರಾಜ್ಯದಲ್ಲಿ ವಕ್ಫ್ ನೋಂದಾಯಿತ/ ಇತರೇ ಸಂಘ ಸಂಸ್ಥೆ ಕಾಯ್ದೆಯಡಿ ನೋಂದಾಯಿತ ಸಂಸ್ಥೆಯಾಗಿರಬೇಕು, ಮದರಸಾದಲ್ಲಿ 40 ಅರ್ಹ ವಿದ್ಯಾರ್ಥಿಗಳಿರಬೇಕು, ತರಗತಿ ಕೊಠಡಿಗಳೊಂದಿಗೆ ವಸತಿ ಸೌಲಭ್ಯವನ್ನು ಹೊಂದಿರಬೇಕು. ಆನ್ಲೈನ್ ಅರ್ಜಿಯನ್ನು ಜ. 20 ರೊಳಗಾಗಿ ಸಲ್ಲಿಸಬೇಕು ಹಾಗೂ ದಾಖಲೆಗಳೊಂದಿಗೆ ಪ್ರಸ್ಥಾವನೆಯನ್ನು ಜಿಲ್ಲಾ ಆಧಿಕಾರಿಗಳ ಕಛೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದೂರವಾಣಿ ಸಂಖ್ಯೆ:tel:+918277799990, tel:+9108382220336, ವೆಬ್ಸೈಟ್ https://dom.karnataka.gov.in/ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ, ಅಥವಾ ತಮ್ಮ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಮಾಹಿತಿ ಪಡೆಯಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top