Slide
Slide
Slide
previous arrow
next arrow

ದಾಂಡೇಲಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

300x250 AD

ದಾಂಡೇಲಿ: ನಗರದ ಆದಿಜಾಂಬವಂತ ಸಂಘ ಹಾಗೂ ಮಹಾನಾಯಕ ಡಾ:ಬಿ.ಆರ್.ಅಂಬೇಡ್ಕರ್ ಸೇನೆ ವತಿಯಿಂದ ನಗರಸಭೆ ಮುಂಭಾಗದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆದಿಜಾಂಬವಂತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ನಡಿಗೇರ, ಮಹಾರ ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು. ಪೇಶ್ವೆಗಳು ಜಾತಿ ವ್ಯವಸ್ಥೆಯಡಿ ಆಡಳಿತ ನಡೆಸುತ್ತಿದ್ದರು. ಪೇಶ್ವೆ ಬಾಜಿರಾಯನನ್ನು ಸೋಲಿಸಲು ಬಂದ ಬ್ರಿಟಿಷರು ಮಹಾರ ಯೋಧರ ನೆರವು ಕೋರಿದ್ದರು. ಆದರೆ, ಮಹಾರ ಯೋಧರು ಪೇಶ್ವೆಗೆ ಷರತ್ತಿನ ಬೆಂಬಲ ನೀಡಲು ಆತನ ಬಳಿಗೆ ತನ್ನ ದಂಡನಾಯಕ ಸಿದ್ಧನಾಯಕನನ್ನು ಕಳಿಸಿದರು ಎಂದು ಹೇಳಿದರು. ಬಾಜಿರಾಯನ ಸೈನ್ಯವನ್ನು ಸೋಲಿಸಿದಂತಹ ಐತಿಹಾಸಿಕ ಭೀಮಾ-ಕೋರೆಗಾವ್ ಮನುವಾದಿಗಳು ಇತಿಹಾಸದಿಂದ ಮುಚ್ಚಿಟ್ಟಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬ್ರಿಟನ್‍ನಲ್ಲಿ ಅಧ್ಯಯನ ಮಾಡುವಾಗ ಬ್ರಿಟನ್ ಮ್ಯೂಸಿಯಂ ಗ್ರಂಥಾಲಯದಲ್ಲಿ ಈ ಯುದ್ದದ ಕುರಿತು ಮಾಹಿತಿ ಸಿಕ್ಕಿದ್ದು, ಇದನ್ನು ಸಂಶೋಧನೆ ಮಾಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರುಗಳಾದ ಹನುಮಂತ ಹರಿಜನ, ಧ್ಯಾಮಣಾ ಹರಿಜನ, ಬಸುರಾಜ ಹರಿಜನ, ಸುರೇಶ ಕೇದಾರಿ, ದತ್ತು ಡಿ.ಮಾಳಗೆ, ಸದಾಶಿವ ಡಿ. ಕಾಂಬಳೆ, ಶಕೀಲಾ ಬಾನು, ಹುಸೇನಮಿಯಾ,ರಾಜೇಶ ಕಾಂಬಳೆ, ಪರಶುರಾಮ ಸೂರನಾಯ್ಕ, ಹೊನ್ನೂರಪ್ಪಾ ಜರಿ, ಶ್ರೀನಿವಾಸ ಹರಿಜನ, ಜೋತಿಬಾ ಚೌವ್ಹಾಣ, ಮಾರುತಿ ಕಾಂಬಳೆ, ಹನುಮಂತ ಭಾವಿಮನಿ ಹಾಗೂ ಸಂಘದ ಪ್ರಮುಖರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top