Slide
Slide
Slide
previous arrow
next arrow

ಜೊಯಿಡಾದಲ್ಲಿ ಮಾದಕ ದ್ರವ್ಯ ವಿರೋಧಿ ಜಾಥಾ

300x250 AD

ಜೊಯಿಡಾ: ಸಮಾಜದಲ್ಲಿ ಶಾಂತಿ ಸುವ್ಯಸ್ಥೆ ನೆಲೆಸ ಬೇಕಾದರೆ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಸಿಪಿಐ ನಿತ್ಯಾನಂದ ಪಂಡಿತ್ ಹೇಳಿದರು.

ಅವರು ಜೊಯಿಡಾದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಜಾಥಾವನ್ನು ಉದ್ದೇಶಿಸಿ ಮಾತನಾಡುತ್ತಾ, ಸಾರ್ವಜನಿಕರು ಉತ್ತಮ ಸಮಾಜದ ಹೊಣೆಗಾರರಾಗಿದ್ದು ನಮ್ಮ ನಮ್ಮ ಊರಲ್ಲಿ ಉತ್ತಮರಾಗಿ ನಾವು ನಮ್ಮವರು ಇರಬೇಕೆಂದರೆ ಉತ್ತಮ ಸಮಾಜದ ನಿರ್ಮಾಣವನ್ನು ನಾವೇ ಮಾಡಬೇಕು. ಆ ದಿಶೆಯಲ್ಲಿ ನಾವು ವ್ಯಸನಮುಕ್ತರಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ನಮ್ಮತನ ತೋರಿಸಿಕೊಡೋಣ ಎಂದರು.

ಪಿಎಸ್ಐ ಮಹೇಶ ಮಾಳಿ ಜಾತಾದ ನೇತೃತ್ವ ವಹಿಸಿ ಇಂದಿನ ಬಾಲಕರೆ ನಾಳಿನ ಪ್ರಜೆಗಳು ನಾಗರಿಕರು ಆಗುವ ಕಾರಣ ಸಮಾಜದಲ್ಲಿ ನಾವು ಗೌರವಯುತವಾಗಿ ಬಾಳಬೇಕಾದರೆ ಉತ್ತಮ ಸಮಾಜ ನಿರ್ಮಾಣದಲ್ಲಿ ನಾವು ಬಾಗಿಗಳಾಗೋಣ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

300x250 AD

ಆನಂತರ ತಾಲೂಕು ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾವು ಸಂಚರಿಸಿತು. ಜಾಥಾ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದ್ದರು

Share This
300x250 AD
300x250 AD
300x250 AD
Back to top