Slide
Slide
Slide
previous arrow
next arrow

ಜ.4ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.4, ಗುರುವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಪಟ್ಟಣ ಶಾಖಾ ವ್ಯಾಪ್ತಿಯ ಲಯನ್ಸ್ ನಗರ, ಯಲ್ಲಾಪುರ ರಸ್ತೆ, ಪ್ರಗತಿನಗರ, ಮರಾಠಿಕೊಪ್ಪ, ವಿದ್ಯಾನಗರ, ಗುರುನಗರ, ಸಹ್ಯಾದ್ರಿಕಾಲೋನಿ, ಕಾಲೇಜು ರಸ್ತೆ, ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನಗರ, ಫಾರೆಸ್ಟ್ ಕಾಲೋನಿ, ಲಂಡಕನಹಳ್ಳಿ, ಡಿಪೋ, ಬಸಟ್ಟಿಕೇರೆ, ಡಾನಬಸ್ಕೋ ಶಾಲೆ ಸುತ್ತಮುತ್ತಲಿನ ಪ್ರದೇಶ, ಜವಳಿ ರೈಸ್‌ಮಿಲ್ ಹಾಗೂ ಗ್ರಾಮೀಣ ಶಾಖಾ ವ್ಯಾಪ್ತಿಯ ಚಿಪಗಿ ಹಾಗೂ ತಾರಗೋಡ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top