Slide
Slide
Slide
previous arrow
next arrow

ಬಿಜೆಪಿಯಿಂದ ಅನಂತಮೂರ್ತಿ ಹೆಗಡೆಗೆ ಟಿಕೆಟ್ ನೀಡಲು ದಲಿತ, ರೈತ ಸಂಘಟನೆಯಿಂದ ಒತ್ತಾಯ

300x250 AD

ಮುಂಡಗೋಡ: ಮುಂಬರುವ ದಿನದಲ್ಲಿ ಲೋಕಸಭಾ ಚುನಾವಣೆ ಬರುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಅನೇಕ ಜನರು ಆಕಾಂಕ್ಷಿಗಳಿದ್ದು, ಅನೇಕರ ಹೆಸರು ಕೇಳಿ ಬರುತ್ತಿದೆ. ಆದರೆ ಬಿಜೆಪಿ ಪಕ್ಷವು ಕೆನರಾ ಲೋಕಸಭಾ ಕ್ಷೇತ್ರಕ್ಕೆ ಅನಂತಮೂರ್ತಿ ಹೆಗಡೆಗೆ ಟಿಕೆಟ್ ನೀಡಬೇಕು ಎಂದು ಮುಂಡಗೋಡ ತಾಲೂಕಾ ದಲಿತ ಹಾಗೂ ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಅನ್ನದಾತ ರೈತ ಸಂಘಟನೆಯ ಕಾನೂನು ಸಲಹೆಗಾರ ಅಮರೇಶ ಹರಿಜನ, ಮುಂಬರುವ ದಿನದಲ್ಲಿ ಲೋಕಸಭಾ ಚುನಾವಣೆ ಬರುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಅನೇಕ ಜನರು ಆಕಾಂಕ್ಷಿಗಳಿದ್ದು, ಅನೇಕರ ಹೆಸರು ಕೇಳಿ ಬರುತ್ತಿದೆ. ಆದರೆ ಬಿಜೆಪಿ ಪಕ್ಷವು ಕೆನರಾ ಲೋಕಸಭಾ ಕ್ಷೇತ್ರಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ, ಅಧ್ಯಕ್ಷರಾದಂತ ಅನಂತಮೂರ್ತಿ ಹೆಗಡೆ ಇವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದರೆ ಇವರು ಬಹುಮತದಿಂದ ಗೆಲ್ಲುತ್ತಾರೆ. ಇವರ ಜೊತೆ ಅನೇಕ ದಲಿತ ಸಂಘಟನೆಗಳು, ರೈತ ಸಂಘಟನೆಗಳು ಬೆಂಬಲವಾಗಿದ್ದು, ಇವರು ಉತ್ಸಾಹಿ ಮತ್ತು ಯುವಕರಿದ್ದು ಜನಪ್ರಿಯವಾದ ಆನೇಹ ಹೋರಾಟಗಳಲ್ಲಿ ಭಾಗಿಯಾಗಿ ಜನರ ನೋವಿಗೆ ಸ್ಪಂದನೆ ನೀಡಿರುತ್ತಾರೆ. ಉತ್ತರಕನ್ನಡ ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮತ್ತು ಈ ಹೋರಾಟದ ಕುರಿತು ಬೆಳಗಾವಿನಯಲ್ಲಿ ನಡೆದ ಅಧಿವೇಶನದಲ್ಲಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಸಮಸ್ಯೆಗಳಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸಾಧಾರಣ ವ್ಯಕ್ತಿ ಇವರಾಗಿದ್ದಾರೆ ಅನೇಕ ಬಡವರ, ರೈತರ, ದೀನ- ದಲಿತರ ನೆರವಿಗೆ ಇವರು ಧಾವಿಸಿರುತ್ತಾರೆ. ನಮಗೆ ಚುನಾವಣೆಗೆ ಬಂದು ಜನರನ್ನು, ಮತದಾರರನ್ನು ಮಾತನಾಡಿಸಿ ಮತ್ತೆ ಚುನಾವಣೆ ಬರುವವರೆಗೆ ಮುಖ ತೋರಿಸದೆ ಮತ್ತೆ ಚುನಾವಣೆ ಬಂದಾಗ ಮಾತ್ರ ಮುಖ ತೋರಿಸುವ ವ್ಯಕ್ತಿ ನಮಗೆ ಬೇಕಾಗಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ಬೇಕಾಗಿರುತ್ತದೆ. ಆದ್ದರಿಂದ ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿಯ ಮುಖಂಡರು ಉತ್ತರಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಒಳ್ಳೆಯ ವ್ಯಕ್ತಿತ್ವ ಮತ್ತು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿರುವ ಅನಂತಮೂರ್ತಿ ಹೆಗಡೆ ಇವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ವಿನಂತಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

300x250 AD

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅನ್ನದಾತ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಜಂಟಿ ಕಾರ್ಯದರ್ಶಿ ಗೋವಿಂದಪ್ಪ ಯರಗಟ್ಟಿ, ತಾಲೂಕಾ ಅಧ್ಯಕ್ಷ ಕೇಮಣ್ಣ ದಾಕಪ್ಪ ಲಮಾಣಿ, ಆರ್. ಪಿ.ಐನ ಜಿಲ್ಲಾಧ್ಯಕ್ಷ ದೀಪಕ್ ಆರ್. ಕಾನಡೆ, ಉಪಾಧ್ಯಕ್ಷ ಲೋಹಿತ್ ಪಾವಸ್ಕರ, ದಲಿತ ಮಿತ್ರ ಸಂಘಸೇನೆಯ ಜಿಲ್ಲಾಧ್ಯಕ್ಷ ಗೀಡಪ್ಪ ಭೋವಿ,ದಲಿತ ಸಂಘಟನೆ ಮುಖಂಡ ರಾಮಚಂದ್ರ ಹರಿಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top