ದಾಂಡೇಲಿ: ತಾಲ್ಲೂಕಿನ ಆಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ತಾಟಗೇರಾದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಡಿದಿಟ್ಟಿದ್ದ ಸಾಗುವಾನಿ ಮರದ 5 ತುಂಡುಗಳು ಪತ್ತೆಯಾಗಿದ್ದು, ಪತ್ತೆಯಾಗಿರುವ ಸಾಗುವಾನಿ ಮರದ ತುಂಡುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ತಾಟಗೇರಾದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರದ ತುಂಡುಗಳನ್ನಿಟ್ಟಿರುವ ಖಚಿತ ಮಾಹಿತಿಯಡಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದರು. ದಾಳಿಯ ವೇಳೆ ಸಾಗುವಾನಿ ಮರದ 5 ತುಂಡುಗಳು ಪತ್ತೆಯಾಗಿದೆ. ಪತ್ತೆಯಾಗಿರುವ ಮರದ ತುಂಡುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದೆ.