ಶಿರಸಿ: ಬೆಂಗಳೂರಿನಲ್ಲಿ ಇರುವ ಮೈಸೂರ್ ಎಜ್ಯುಕೇಶನ್ ಸೊಸೈಟಿ ನೀಡುವ ಸಂಸ್ಕೃತ ವಿದ್ವತ್ಸಮ್ಮಾನವನ್ನು ಹೆಸರಾಂತ ವಿದ್ವಾಂಸ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಪ್ರದಾನ ಮಾಡಲಿದೆ.
ಜ.6ರಂದು ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಸಂಜೆ ೫ಕ್ಕೆ ನಡೆಯುವ ಸಮಾರಂಭದಲ್ಲಿ ಮೇಲುಕೋಟೆ ಯತಿರಾಜಮಠದ ಪೀಠಾಧಿಪತಿಗಳಾದ ಶ್ರೀಯತಿರಾಜನಾರಾಯಣ ರಾಮಾನುಜ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಲಿದ್ದಾರೆ. ಇದೇ ವೇಳೆ ಡಾ.ಎಸ್.ಆರ್. ಲೀಲಾ, ವಿದ್ವಾನ್ ರಾಮ ವಿಠಲಾಚಾರ್ಯ, ಡಾ.ಟಿ.ಎಸ್.ಸತ್ಯವತಿ ಅವರಿಗೂ ಸಮ್ಮಾನ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.