ಶಿರಸಿ: ಶಿರಸಿಯಲ್ಲಿ ನಡೆಯುತ್ತಿರುವ ಗೋ ಕಳ್ಳತನವನ್ನು ತಡೆಯುವಂತೆ ಆಗ್ರಹಿಸಿ ಮರಾಠಿಕೊಪ್ಪ ಗೋ ಸೇವಾ ಸಮಿತಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ನಗರದ ಮರಾಠಿಕೊಪ್ಪ ಭಾಗದಲ್ಲಿ ಇತ್ತೀಚಿಗೆ ಮಧ್ಯರಾತ್ರಿ ವೇಳೆ ದನಗಳನ್ನು ಕದ್ದುಕೊಂಡು ಹೋದ ಘಟನೆ ನಡೆದಿದ್ದು, ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೇ ರೀತಿ ನಗರದ ಹಲವು ಭಾಗದಲ್ಲಿ ದನಗಳ್ಳತನ ನಡೆಯುತ್ತಿದ್ದು, ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಅವರು ಕ್ರಮ ಕೈಗೊಳ್ಳಲು ಗೋ ಸೇವಾ ಸಮಿತಿ ಮನವಿ ಸಲ್ಲಿಸಿದೆ.