Slide
Slide
Slide
previous arrow
next arrow

ಪಿಎಂ ವಿಶ್ವಕರ್ಮ ಯೋಜನೆ ಲಾಭ ಪಡೆದುಕೊಳ್ಳಲು ಧವಳೋ ಗಣೇಶ್ ಮನವಿ

300x250 AD

ಜೋಯಿಡಾ : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಲಾಭವನ್ನು ಅರ್ಹ ಫಲಾನುಭವಿಗಳು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ನಂದಿಗದ್ದೆ ಗ್ರಾಮ ಪಂಚಾಯತ್ ಸದಸ್ಯರಾದ ಧವಳೋ ಗಣೇಶ್ ಸಾವರ್ಕರ್ ಅವರು ಕರೆ ನೀಡಿದ್ದಾರೆ.

ಅವರು ಈ ಬಗ್ಗೆ ಸೋಮವಾರ ಜೋಧಾ ತಾಲೂಕಿನ ನಂದಿಗದ್ದೆಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಪ್ರಧಾನ ಮoತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ, ಆರ್ಥಿಕವಾಗಿ ಹಿಂದುಳಿದ 18 ವರ್ಗಗಳ ಸಾಂಪ್ರದಾಯಿಕ ಕುಶಲಕರ್ಮಿಗಳ ವೃತ್ತಿಗಳಿಗೆ ಸಂಬಂಧಿಸಿದಂತೆ ಆಸಕ್ತ ಪುರುಷ – ಮಹಿಳಾ ಪಲಾನುಭವಿಗಳಿಂದ ಆನಲೈನ್ ಅರ್ಜಿ ಕರೆಯಲಾಗಿದೆ. ಈಗಾಗಲೇ ಸದರಿ ಕುಶಲಕರ್ಮಿ ವೃತ್ತಿಗಳಲ್ಲಿ ಪರಿಣಿತಿ ಹೊಂದಿದವರು ಮಾತ್ರ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪರಿಶೀಲನೆಯಾಗಿ ಆಯ್ಕೆಯಾದ ಪಲಾನುಭವಿಗಳಿಗೆ ತರಬೇತಿ(5 – 7 ದಿನಗಳು), ತರಬೇತಿ ಭತ್ತೆಯನ್ನು‌ ನೀಡಲಾಗುತ್ತಿದ್ದು, ತರಬೇತಿ ಪಡೆದ ಬಳಿಕ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಕಾಲ‌ ಕಾಲಕ್ಕೆ ಹೆಚ್ಚಿನ ಮೊತ್ತದ ಸಾಲ ಪಡೆಯಬಹುದಾಗಿದೆ. ಈ ಯೋಜನೆಯ ಕುರಿತಾಗಿ ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯತ ಕಚೇರಿಯನ್ನು ಸಂಪರ್ಕಿಸುವಂತೆ ಧವಳೋ ಗಣೇಶ ಸಾವರ್ಕರ್ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top